Akashadhi lyrics, ಆಕಷಧಿ the song is sung by Rajath Hegde. from Calendar. was composed by Sunaadh Gowtham lyrics written by Pramod Maravante.
ಆಕಷಧಿ Akashadhi Lyrics in Kannada
ಆಕಾಶದಿ ಅಲೆದೆ ಅಲೆದೆ ನಾ
ನಿನ್ನಂತ ತಾರೆಯ ಕಂಡೆ ಇಲ್ಲ ನಾ
ಆನಂದವ ಅರಸಿ ನಡೆದೆ ನಾ
ನಿನ್ನಂತ ಉನ್ಮಾದ ಕಂಡೆ ಇಲ್ಲ ನಾ
ಮಳೆಹನಿಯಾಗಿ ನೀನು ಸವರಿ ಮನ
ಮರಳಿ ಮರಳಿ ನಾ ಅರಳೊ ಋತುಮಾನ
ಹೃದಯಕೆ ತಾಕಿ ನಿನ್ನ ಸಿಹಿ ಗಮನ
ಸವಿದೆ ಸವಿದೆ ನಾ ಮಧುರ ಬಿಗುಮಾನ
bharatlyrics.com
ಆ ಕಣ್ಣಿಂದ ಮಿಂಚೊಂದು ಜಾರಿ
ಈ ಕಣ್ಣ ಅಂಚು ಸೇರಿ
ಆಂತರ್ಯವೆಲ್ಲ ಓಡಾಡಿದೆ
ಸಾದ ಸಂವಾದ ಕೊನೆಯಾಗಿ
ಮೌನವೆ ಮೃದುವಾಗಿ
ನನ್ನೊಂದಿಗೀಗ ಮಾತಾಡಿದೆ
ಆಕಾಶದಿ ಅಲೆದೆ ಅಲೆದೆ ನಾ
ನಿನ್ನಂತ ತಾರೆಯ ಕಂಡೆ ಇಲ್ಲ ನಾ
ಈ ಸವಿನಯ ರೂಪಾಂತರ
ಸಹಜ ಬಿಡು
ನೀ ಹೊಸ ತರ ವ್ಯಾಮೋಹವ
ನನಗೆ ಕೊಡು
ಈ ಸಮಯ ಸರಿದರು ಕೂಡ
ಹುಡುಕಿ ತರುವೆ ನಾ
ಕಳೆದ ಕ್ಷಣವನ್ನ
ಬಾ ಕಲಿಸುವೆ ಭಾವದ ಕಾವ್ಯವ
ಬರೆಯೊ ಕಲೆಯನ್ನ
ಹಿಡಿದು ಬೆರಳನ್ನ
ಆ ಕಣ್ಣಿಂದ ಮಿಂಚೊಂದು ಜಾರಿ
ಈ ಕಣ್ಣ ಅಂಚು ಸೇರಿ
ಆಂತರ್ಯವೆಲ್ಲ ಓಡಾಡಿದೆ
ಸಾದ ಸಂವಾದ ಕೊನೆಯಾಗಿ
ಮೌನವೆ ಮೃದುವಾಗಿ
ನನ್ನೊಂದಿಗೀಗ ಮಾತಾಡಿದೆ
