Hejjeye Roopisu lyrics, ಹೆಜ್ಜೆಯೇ ರೂಪಿಸು the song is sung by Keerthan Holla from Nodidavaru Enanthare soundtrack was composed by Mayuresh Adhikari with lyrics written by Jayant Kaikini.
ಹೆಜ್ಜೆಯೇ ರೂಪಿಸು Hejjeye Roopisu Lyrics in Kannada
ಹೆಜ್ಜೆಯೇ ರೂಪಿಸು ಇಲ್ಲಿಂದ ಬೇರೆ ಕಥೆ
ಕಾಣದಾ ನಾಳೆಯು ಉಂಟೀಗ ನನ್ನಾ ಜೊತೆ
ಹುಸಿ ಸಂಬಂಧದ ಹೊರೆ ನಾ ತೊರೆಯುವೆ
ಹೊಸ ಸಂಚಾರಕೆ ಸದಾ ಹಾತೊರೆಯುವೆ
ಸದ್ದಿಲ್ಲದೇ ಒಂದು ಅಧ್ಯಾಯವ ಇಗೋ ನಾ ತೆರೆಯುವೆ
ಹೊಸ ಕ್ಷಿತಿಜವೊಂದು ದೂರಾ ಕಂಡಾಗ
ಬದಲಾದೀತೆ ಮುಂಜಾವಿನ ರಾಗ
ಹೆಜ್ಜೆಯೇ ರೂಪಿಸು ಇಲ್ಲಿಂದ ಬೇರೆ ಕಥೆ
ಕಾಣದಾ ನಾಳೆಯು ಉಂಟೀಗ ನನ್ನಾ ಜೊತೆ
ಮೈಲಿಗಲ್ಲೇ ನಾನಾಡದ ಮಾತಾ ನೀ ಆಲಿಸು
ಮೈಲಿಗಲ್ಲೇ ನಾನೋಡದ ಸೇತುವೆ ದಾಟಿಸು
ಕನಸಿನ ಊರಿಗೆ ನೀನೆ ದಾರಿ ತೋರಿಸು
ಗಾಳಿಯೇ ಛಾಪಿಸು ಇಲ್ಲಿಂದ ಬೇರೆ ಕಥೆ
ಬೆಚ್ಚನೆ ಸ್ಫೂರ್ತಿಯೂ ಇದ್ದಾಗ ನನ್ನ ಜೊತೆ
ಪಿಸು ಮಾತಲ್ಲಿಯೆ ಶ್ರುತಿ ಒಂದಾಗುತ್ತಾ
ಕಿಡಿ ಕಣ್ಣಲ್ಲಿರೆ ಅಲೆ ನೂರಾಗುತಾ
ಬೇಡೆಂದರು ಕೂಡ ಈ ಜೀವಕೆ ಹಠ ಹೆಚ್ಚಾಗುತಾ
ಜೊತೆಗಿರಲು ಜೀವ ನೋವೆಲ್ಲಾ ಮಾಯಾ
ಈ ಲೋಕಾನೇ ಅತಿ ಆತ್ಮೀಯ
ಗಾಳಿಯೇ ಛಾಪಿಸು ಇಲ್ಲಿಂದ ಬೇರೆ ಕಥೆ
ಬೆಚ್ಚನೆ ಸ್ಫೂರ್ತಿಯೂ ಇದ್ದಾಗ ನನ್ನ ಜೊತೆ