ಮಾಯಗಂಗೆ Maaya Gange Lyrics - Arman Mallik

Maaya Gange lyrics, ಮಾಯಗಂಗೆ the song is sung by Arman Mallik from Banaras. Maaya Gange Love soundtrack was composed by B. Ajaneesh Loknath with lyrics written by Dr. V. Nagendra Prasad.

ಮಾಯಗಂಗೆ Lyrics in Kannada

ಮಾಯಗಂಗೆ ಮಾಯಗಂಗೆ ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ

ನಾನೇ ಗಂಗೆಯೋ
ನನ್ನ ಒಳಗೆ ಗಂಗೆಯೋ
ಅನ್ನೋ ಸಂಶಯ ಮೂಡಿದೆ ಈಗ

ದೇವರೂರಿಗೆ ನಾನೇ ದಾರಿ ಹೋಕನಾ
ಅನ್ನೋ ಅಚ್ಚರಿ ಮೂಡಿಸೋ ಯೋಗ

ಪುಟ್ಟ ದೋಣಿ ಒಂದ್ದು ಸುಳಿಗೆ
ಸಿಕ್ಕಕೊಂಡ ಹಾಗಿದೆ
ಇಂಥದೊಂದು ದಾಳಿಯನ್ನು
ಜೀವ ತಾಳಬಲ್ಲದೆ

ಮಾಯಗಂಗೆ ಮಾಯಗಂಗೆ ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ..

bharatlyrics.com

ಆ ಬಾನೆತ್ತರ ಈ ಗೋಪುರ ವಾಲೊತರ
ಹಾ ಏಳು ಸ್ವರ ಈ ಪಾಮರ ಕೇಳೋ ತರ

ಏ ಏ ನಾನೀಗ ಅವಳ
ಹೆಜ್ಜೇನ ನೋಡೋ ತರ
ಸಾಗಿದೆ ಈ ಪಾದ ಹೋಗೋ
ಗುರಿನೇ ಕಾಣದೆ

ದಟ್ಟ ಬೆಳಕಲ್ಲಿ ಎಲ್ಲ ಕಟ್ಟಲಾಗಿದೆ
ನೀನು ಹೇಳಿದೆ ಡೊಂಕಿನ ದಾರಿ
ಹುಟ್ಟಬೇಕಿದೆ ಹುಟ್ಟಬೇಕಿದೆ
ಪ್ರೀತಿ ಮಾಡಲು ಸೀಳುತ ಗೋರಿ

ಮಾಯಗಂಗೆ ಮಾಯಗಂಗೆ ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ..

ಈ ಗೂಡಂಗಡಿ ಚಹಾ ಪುಡಿ ಮಾತಾಡಿದೆ
ಹೇ ಏನಾಯಿತು ಹೇಗಾಯಿತು ಹೇಳ್ ಎಂದಿದೆ

ಹೇ..ಆ ಕಣ್ಣ ಒಳಗೆ ನಕ್ಷತ್ರ ಮಂಡಳಿ
ಮಾತಲಿ ನಾ ಹೇಗೆ ಅವಳ ವಿಚಾರ ಹೇಳಲಿ

ತುಂಬಾ ಜಂಗುಳಿ ಇಲ್ಲಿ ಭಸ್ಮದೋಕುಳಿ
ನಾನು ಮೈಲಿಗೆ ಆಗದ ಆತ್ಮ
ಹರಿಯುತಿರುವೆನು ಹೇಗೆ ನಿಂತುಕೊಳ್ಳಲಿ
ನನ್ನ ಮುಂದಿನ ಪೂಜೆಯೇ ಪ್ರೇಮ

ಮಾಯಗಂಗೆ ಮಾಯಗಂಗೆ ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ.

Maaya Gange Lyrics PDF Download
Print Print PDF     Pdf PDF Download

FAQs

The song Maaya Gange is from the Banaras.

The song Maaya Gange was sung by Arman Mallik.

The music for Maaya Gange was composed by B. Ajaneesh Loknath.

The lyrics for Maaya Gange were written by Dr. V. Nagendra Prasad.

The music director for Maaya Gange is B. Ajaneesh Loknath.

The song Maaya Gange was released under the Lahari Music.

The genre of the song Maaya Gange is Love.