Maaye lyrics, ಮಾಯೆ the song is sung by Vasuki Vaibhav from Congratulations Brother. Maaye Happy soundtrack was composed by Dhruva MB with lyrics written by Rakshith Nag.
ಮಾಯೆ Maaye Lyrics in Kannada
ಉಸಿರಿರುವ ಪ್ರತಿ ಜೀವಿಗೂ
ಈ ಪ್ರೀತಿಯು ಅನಿವಾರ್ಯವೂ ತಾನೇ
ಶುರುವಾಗಿದೆ ಪ್ರೀತಿಗೂ ಮೀರಿ ಇಲ್ಲೇನೋ
ಅಕ್ಕರೆಯ ಮಮತೆಗೂ ಮೀರಿ ಇನ್ನೇನೋ
ಬಣ್ಣಿಸಲು ಆಗದ ಈ ಬಂಧ ಹೆಸರೇನೋ
ಕಡಲಲ್ಲಿ ಸಿಗುವ ಮುದ್ದಾದ ಮುತ್ತೇನೋ
ಗುರಿ ಇಲ್ಲದೆ, ಜಾರುತ್ತಿದೆ,
ಈ ಹೂಗಳು, ಖುಷಿಯಾ ಕಡೆ
ಹಾರುತ್ತಿದೆ, ಈ ಜೀವವು,
ಯಾವ ಗಂಟಿಗೂ,ಇಲ್ಲಿ ಸಿಲುಕದೆ
ಈ ಲೋಕದಲ್ಲಿ ಬಂಧಗಳೆಲ್ಲ ಒಂದು ಮಾಯೆ,
ಆ ಮಾಯೆಯೊಳಗೆ ಬೆರೆತುಹೋಗಿದೆ ನಮ್ಮ ಛಾಯೆ,
ಇಲ್ಲಿ ಅರಿತರು ಅರಿಯದೆ ಬೆಳೆಯುತ್ತಿರುವ ಮಾಯೆಯ ಹೆಸರೇ
ಸ್ನೇಹ
ಇಲ್ಲಿ ಸ್ನೇಹ ಸ್ನೇಹವು ಮಾಯೆ
ಪ್ರೀತಿ ಪ್ರೀತಿಯು ಮಾಯೆ
ಬಂಧ ಬಂಧಗಳು ಮಾಯೆ
ಎಲ್ಲಾ ಮಾಯೆ
ಇಲ್ಲಿ ಸ್ನೇಹ ಸ್ನೇಹವು ಮಾಯೆ
ಪ್ರೀತಿ ಪ್ರೀತಿಯು ಮಾಯೆ
ಬಂಧ ಬಂಧಗಳು ಮಾಯೆ
ಎಲ್ಲಾ ಮಾಯೆ
ಎಲ್ಲಾ ಮಾಯೆ ಎಲ್ಲಾ ಮಾಯೆ
ಮಾಯೆ ಮಾಯೆ ಮಾಯೆ ಮಾಯೆ
ಇವರ ಈ ನಗುವಿಗೆ, ಕೊನೆಯೇ ಇಲ್ಲ
ಪ್ರೀತಿಸುವ ಮನಗಳಿಗೆ ಎಲ್ಲಾ, ಅಂಜದೆ ಇಲ್ಲ
ಇವರು ಈ ಸ್ನೇಹವನ್ನು, ಬಯಸಿದ್ದಲ್ಲ
ಕಾಲವ ನಡೆಸೋ ಆ ರಾಜನ, ಕೃಪೆಯೇ ಎಲ್ಲಾ
ಸೋತಿದ್ದರು ಗೆಲ್ಲುತ್ತಿರುವ
ಭಾವನೆಗಳೆ ಈ ಮಾಯೆ
ಮನದೊಳಗೆ ಗೊಂದಲವಿದ್ದರೂ
ಖುಷಿಯ ಕ್ಷಣಗಳೇ ಮಾಯೆ
bharatlyrics.com
ಮುಂದೋಗುವ ದಾರಿಗಳೆಲ್ಲ
ಮಂಜಾಗಿರುವುದೇ ಮಾಯೆ
ಏನನ್ನು ಅರಿಯದೆ ಸುಮ್ಮನೆ
ಸಾಗುವ ಕಲೆಯೇ ಮಾಯೆ
ಎಲ್ಲಾ ಮಾಯೆ ಎಲ್ಲಾ ಮಾಯೆ
ಮಾಯೆ ಮಾಯೆ ಮಾಯೆ ಮಾಯೆ
ಇಲ್ಲಿ ಸ್ನೇಹ ಸ್ನೇಹವು ಮಾಯೆ
ಪ್ರೀತಿ ಪ್ರೀತಿಯು ಮಾಯೆ
ಬಂಧ ಬಂಧಗಳು ಮಾಯೆ
ಎಲ್ಲಾ ಮಾಯೆ
ಇಲ್ಲಿ ಸ್ನೇಹ ಸ್ನೇಹವು ಮಾಯೆ
ಪ್ರೀತಿ ಪ್ರೀತಿಯು ಮಾಯೆ
ಬಂಧ ಬಂಧಗಳು ಮಾಯೆ
ಎಲ್ಲಾ ಮಾಯೆ.
