Melobba Maayavi lyrics, ಮೇಲೊಬ್ಬ ಮಾಯಾವಿ the song is sung by Vijay Prakash from Beguru Colony soundtrack was composed by Abhinandan Kashyap with lyrics written by Ghouse Peer.
ಮೇಲೊಬ್ಬ ಮಾಯಾವಿ Melobba Maayavi Lyrics in Kannada
ಮೇಲೊಬ್ಬ ಮಾಯಾವಿ ಆಡಿಸುವ ಆಟದಲ್ಲಿ
ಬೊಂಬೆಗಳು ನಾವು ನೀವು
ಯಾವಾಗ ಹೇಗಂತ ಹೇಳೋಕೆ ಆಗೋದಿಲ್ಲ
ಬಾಳಲ್ಲಿ ಸಾವು ನೋವು
ಸಿಹಿಯಾದ ತಂಗಾಳಿ ಬಿರುಗಾಳಿ ಆದ ಹೊತ್ತು
ಅರಳೋಕೆ ಮುಂಚೇನೆ ಹೂವೊಂದು ಬಾಡಿಬಿತ್ತು
ಕೈ ಜಾರಿ ಹೋಯ್ತು ಕನಸು
ನೋವನು ನುಂಗೋದ್ ಹೇಗೆ
ನಷ್ಟವ ತುಂಬೋದ್ ಹೇಗೆ
ಸೋತರೆ ಜೀವಾ ಹೀಗೆ
ಕಾಲವ ನಂಬೋದ್ ಹೇಗೆ
ಯಾರನ್ನು ಈಗ ನಾನು ಕರೆಯೋದು ಗೆಳೆಯ ಎಂದು
ಏಕಾಂಗಿ ಆದೆ ಇಂದು
ಆಗಸದ ಅಂಚಿನಿಂದ ಸಿಡಿಲೊಂದು ಬಡಿದಾ ಮೇಲೆ
ಸುಟ್ಟಿದೆ ಭೂಮಿ ಬೆಂದು
ಪರಮಾತ್ಮ ನೀನು ಸುಳ್ಳ ದಯೆ ಇಲ್ಲದಂತ ಮುಳ್ಳ
ತಿಳಿ ನೀರಿನಲ್ಲಿ ಕಲ್ಲ ಎಸೆಯೋ ಆಸೆ ಏತಕೆ
ಬೆಲೆ ಬಾಳುವಂತ ಮುತ್ತು ಮರೆಯಾಗಿ ಹೋದ ಹೊತ್ತು
ಅತಿಯಾದ ಭಾರ ಬಿತ್ತು ಮನಕೇ
ಮೇಲಕೆ ಏಳೋದ್ ಹೇಗೆ
ಮುಂದಕೆ ಸಾಗೋದ್ ಹೇಗೆ
ಬಿದ್ದರೆ ಏಟು ಹೀಗೆ
ಜೀವನ ತೂಗೋದ್ ಹೇಗೆ
Melobba Maayavi Lyrics
Melobba maayavi aadisuva atadalli
Bombegalu naavu nivu
Yavaga heganta heloke agodilla
Baalalli saavu novu
Sihiyada tangali birugali aada hottu
Araloke munchene huvondu baadibittu
Kai jaari hoytu kanasu
Novanu nungodh hege
Nastava tumbod hege
Sotare jeeva hege
Kalava nambod hege
Yarannu ega nanu kareyodu geleya yendu
Yekangi ade indu
Aagasada anchininda sidilondu badida mele suttide bhomi bendu
Paramatma ninu sulla daye illadante mulla
Tili neerinalli kalla yeseyo aase yetake
Bele baluvanta muttu mareyagi hoda hottu
Atiyaada bhara bittu manake
Melake yelod hege
Mundake sagod hege
Biddare yetu hige
Jeevana tugod hege