Modalane Maathu lyrics, the song is sung by Sanjith Hegde, Lahari Mahesh from Hayagrriva. Modalane Maathu Romantic soundtrack was composed by Judah Sandhy with lyrics written by Yogaraj Bhat.
ಮೊದಲನೆ ಮಾತು Modalane Maathu Lyrics in Kannada
ಮೊದಲನೆ ಮಾತು ತೊದಲುವೆ ನಾನು
ಪದಗಳ ನೀನೇ ಹೇಳಿಕೊಡು
ಸನಿಹಕೆ ಬಂದು ನಲುಮೆಯಲೊಂದು
ಮನಸಿನ ಹಾಡು ಹಾಡಿಬಿಡು
ಬಿಸಿ ಉಸಿರಲ್ಲಿ ಬಯಕೆಗಳನ್ನು
ಹೇಳುವೆ ಪೂರ್ತಿ ಕೇಳಿಬಿಡು
ಕೋರುವೆ ನಿನಗೆ ತೋಳಿನ ಒಳಗೆ
ಕೊನೆಯ ವರೆಗೆ ಇರಲು ಬಿಡು
ಮೊದಲನೆ ಮಾತು
ಭಾವನೆ, ಕಾಮನೆ ಬೆಸೆದು ನೋಡು ಬೇಗನೆ
ಬಂದು ನೀ ನೀಗಿಸು, ನೀನು ಇರದ ವೇದನೆ
ಕಣ್ಣ ಬೆರೆಸು ಕಳ್ಳಾಟ ಕಲಿಸು
ಸುಡುವ ವಿರಹ ಮುಗಿಸಿಬಿಡು
ಕನಸಲಿ ಪಡೆದ ಚುಂಬನವನ್ನು
ನನಸಲಿ ನನಗೆ ಮರಳಿಕೊಡು
ನನ್ನನು ಏನು ಕೇಳದೆ ನೀನು
ತುಟಿಗೆ ತುಟಿಯ ಬೆರೆಸಿಬಿಡು
ಸ್ಪರ್ಶವು ಪ್ರೇಮಕೆ ಮೊತ್ತ ಮೊದಲ ಪೀಠಿಕೆ
ಸನಿಹಕೆ ಬಂದರೆ ಕೊಲ್ಲುತಿಹುದು ನಾಚಿಕೆ
ಬಾಚಿ ಹಿಡಿದು ಪಿಸುಮಾತು ನುಡಿದು
ಮೊದಲ ಹೆಜ್ಜೆ ಹೇಳಿಕೊಡು
ದುಂಬಿಯ ದಾಳಿ ತಡೆವುದು ಹೇಗೆ
ಹೂವಿಗೆ ಚೂರು ಕಲಿಸಿಕೊಡು
ಒಲವಿನ ಹಾದಿ ತುಳಿವುದು ಹೇಗೆ
ಸಾಗುತ ಹೀಗೆ ತಿಳಿಸಿಬಿಡು
ಬಿಸಿ ಉಸಿರಲ್ಲಿ ಬಯಕೆಗಳನ್ನು
ಹೇಳುವೆ ಪೂರ್ತಿ ಕೇಳಿಬಿಡು
ಕೋರುವೆ ನಿನಗೆ ತೋಳಿನ ಒಳಗೆ
ಕೊನೆಯವರೆಗೆ ಇರಲು ಬಿಡು
ಮೊದಲನೆ ಮಾತು.
Modalane Maathu Lyrics
Modalane maathu thodaluve naanu
Padagala neene heli kodu
Sanihake bandu nalumeyalondhu
Manasina haadu haadi bidu
bharatlyrics.com
Bisi usiralli bayakegalannu
Heluve poorthi keli bidu
Koruve ninage tholina olage
Koneya varege iralu bidu
Modalane maathu
Bhaavane, kaamane besedu nodu begane
Bandu nee neegisu, neenu irada vedane
Kanna beresu kallaata kalisu
Suduva viraha mugisi bidu
Kanasali padeda chumbanavannu
Nanasali nanage marali kodu
Nannanu yenu kelade neenu
Thutige thutiya berasi bidu
Sparshavu premake mottha modala peetike
Sanihake bandare kolluthihudu naachike
Baachi hididu pisumaathu nudidu
Modala hejje heli kodu
Dumbiya daali thadevudu hege
Hoovige chooru kalisi kodu
Olavina haadi thulivudu hege
Saagutha heege thilisi bidu
Bisi usiralli bayakegalannu
Heluve poorthi keli bidu
Koruve ninage tholina olage
Koneya varege iralu bidu
Modalane maathu.
