Mungaru Maleyalli lyrics, ಮುಂಗಾರು ಮಳೆಯಲ್ಲಿ the song is sung by Sid Sriram from Andondittu Kaala soundtrack was composed by Raghavendra V with lyrics written by Dhananjay Ranjan.
ಮುಂಗಾರು ಮಳೆಯಲ್ಲಿ Mungaru Maleyalli Lyrics in Kannada
ಮುಂಗಾರು ಮಳೆಯಲ್ಲಿ ತಂದಲ್ಲೆ ನೀನಿಲ್ಲಿ
ಪ್ರೀತಿಯ ಮುನ್ಸೂಚನೆ
ನಿಂತಲ್ಲೇ ನಿಂತಲ್ಲಿ ನಿನ್ನದೇ ಗುಂಗಲ್ಲಿ
ನೆನೆದೂ ಹೋದೆನೇ
ನನ್ನ ಎಚ್ಚರಗೊಳಿಸಿ ಇನ್ನು ಅಚ್ಚರಿಮೂಡಿಸಿ
ನನ್ನ ಕಣ್ತುಂಬುತಾ ಹಾಗೇ ಬಿಗಿದಪ್ಪುತ್ತಾ
ಹೃದಯದ ಜೋಕಾಲಿ ತೂಗಿಬಿಡು
ಊರಲ್ಲಿ ಯಾರಿಲ್ಲ ನನ್ನಂತ ಹುಡುಗ
ಅಷ್ಟೊಂದು ನಿನ್ನನ್ನೇ ಪ್ರೀತಿಸುವೆ
ಹೃದಯದ ತೇರಲ್ಲಿ ನಿನ್ನನ್ನು ಕೂರಿಸಿ
ಹೊತ್ತು ತಿರುಗಿಸಲೇನೇ
ಎಲ್ಲಿಲ್ಲದ ಆನಂದ ಅಂದರೆ
ನೆರಳಂತೆ ನಿನ್ ಹಿಂದೆ ಬಂದೆ ಬಂದೆ
ಆ ಓರೆಯ ನೋಟದ ಸಲುವಾಗಿ
ಬೇಕಂತಲೇ ಮುಂದೆ ನಿಂತೆ ನಿಂತೆ
ಸರಸದಲಿ ಸರಸವನೇ ಸ್ಮರಿಸಿ ಸರಿಯುತಾ
ಸರಿ ಅನಿಸೋ ಸವಿಗನಸಾ ನನಗೆ ಒಪ್ಪಿಸುತಿರು
ಕಣ್ಣ ಕಣ್ಣಲ್ಲಿ ಇಡುತಾ ಮಾತು ಮಾತಲ್ಲಿ ಸೆಳೆತ
ಇನ್ನೂ ಹೇಳೋದಿದೆ ಕೇಳು ಚೆನ್ನಾಗಿದೆ
ಕೊನೆಯ ಕ್ಷಣವೂ ನಿನ್ನೊಂದಿಗೆ
ಊರಲ್ಲಿ ಯಾರಿಲ್ಲ ನನ್ನಂತ ಹುಡುಗ
ಅಷ್ಟೊಂದು ನಿನ್ನನ್ನೇ ಪ್ರೀತಿಸುವೆ
ಹೃದಯದ ತೇರಲ್ಲಿ ನಿನ್ನನ್ನು ಕೂರಿಸಿ
ಹೊತ್ತು ತಿರುಗಿಸಲೇನೇ
ನೀನೆಲ್ಲಿಯೋ ನಗುತಲಿರಲು ನನಗಿಲ್ಲಿ ಸಂತಸವಂತೆ
ನಿನ್ ಹೆಸರೇ ಬಣ್ಣದ ವರ್ಣನೆ ಕಾಮನಬಿಲ್ಲಿನಂತೆ
ಸನಿಹದಲಿ ಸೆರೆ ಹಿಡಿವ ಸಲುಗೆ ಕಲಿಸುತ
ಮನ ಮರೆಸೋ ಸಿಹಿ ಮುನಿಸಾ ಆಗಾಗ ತೋರಿಸುತಿರು
ಸಣ್ಣ ಸನ್ನೆಯ ನೀಡುತ ತುಂಟ ನಗೆಯ ಚೆಲ್ಲುತಾ
ಇನ್ನು ಬೇಕಾಗಿದೆ ನೀಡು ನೀ ಕೇಳದೇ
ಜೀವದ ಜೀವನ ನಿನ್ನೊಂದಿಗೆ
bharatlyrics.com
ಊರಲ್ಲಿ ಯಾರಿಲ್ಲ ನನ್ನಂತ ಹುಡುಗ
ಅಷ್ಟೊಂದು ನಿನ್ನನ್ನೇ ಪ್ರೀತಿಸುವೆ
ಹೃದಯದ ತೇರಲ್ಲಿ ನಿನ್ನನ್ನು ಕೂರಿಸಿ
ಹೊತ್ತು ತಿರುಗಿಸಲೇನೇ