Nee Nannavale lyrics, ನೀ ನನ್ನವಳೇ the song is sung by Rajath Hegde, Eesha Suchi from Theertharoopa thandeyavrige. Nee Nannavale Love soundtrack was composed by Joe Costa with lyrics written by Nagarjun Sharma.
ನೀ ನನ್ನವಳೇ Nee Nannavale Lyrics in Kannada
ಕಿರುನಗೆಯೇ ಸ್ವಂತ ಆಗಿದೆ
ಪಯಣ ಶುರು ಆಗಿದೆ
ಬಡಿತ ಎಲ್ಲೆಲ್ಲೋ ಓಡಿದೆ
ಗೊತ್ತು ಗುರಿ ಇಲ್ಲದೆ
ಸಂಚಾರಿ ಆದನು ಸೆರೆ
ಮಿಂಚಂತ ಅಪ್ಸರೆ
ಅವಳೊಂತರ ವರ್ಣಮಾಲೆ
ಪ್ರೀತಿಯ ಶಾಲೆ
ಈ ಭುವಿಯಾ ಸುತ್ತಾಡಿದೆ ನಾನು ನಿನ್ನ ಕಣ್ಣಲೇ
ಆ ಕವಿಯಾ ಸಾಲೊಂದು ನಿನಗೆ ತಂದು ಮುಡಿಸಲೇ
bharatlyrics.com
ನೀ ನನ್ನವಳೇ ಎಷ್ಟೇ ನೋಡಿದರು ಇನ್ನು ಮುಗಿಯುತಿಲ್ಲ
ನೀ ನನ್ನವಳೇ ಆ ಚಂದ್ರ ಕೇಳಿದನು ನಿನ್ನ ಬೆಳಕು ಸಾಲ
ನೀ ನನ್ನವಳೇ ನಿನ್ನ ಬಿಟ್ಟು ನಂಗೆ ಬೇರೆ ಯಾರು ಕಾಣುತಿಲ್ಲ
ನೀ ನನ್ನವಳೇ ಈ ಹೃದಯದಲ್ಲಿ ನೀ ಮುಗಿಯದಂತ ಕಾಲ
ಕಾಮನಬಿಲ್ಲಲ್ಲು ಇರದ ಬಣ್ಣವು ನಿನ್ನ ಕಣ್ಣ ಒಳಗೆ
ಇದ್ದಂತೆ ಕಾಣುತ್ತಲ್ಲಾ ಎಂಥ ಸೌಂದರ್ಯ
ಕಣ್ ತುಂಬಿದೆ ನಿಂದೆ ದೃಶ್ಯ ನನ್ ಪುಟದಲಿ ನೀನೆ ವಿಷ್ಯ
ಹೂವರಳೋ ಹಾಗೆ ಹುಡುಗಿ ನಿನ್ನ ಆಂತರ್ಯ
ಸುಡೋ ಚಳಿ ಸುಡದ ಬಿಸಿಲು ಬಂತು ಈಗ
ನಾ ಗೊತಿಲ್ದಂಗೆ ಕೊಟ್ಟೆ ಹೃದಯದ ಅರ್ಧ ಭಾಗ
ನಿನ್ನ ಬಗ್ಗೆ ಹೇಳ್ತಾ ಇತ್ತು ಹಚ್ಚ ಹಸಿರು
ನೀನೊಂದು ಪಿಸು ಮಾತಾಡೋ ತುಂತುರು
ನೀ ನನ್ನವಳೇ ಎಷ್ಟೇ ನೋಡಿದರು ಇನ್ನು ಮುಗಿಯುತಿಲ್ಲ
ನೀ ನನ್ನವಳೇ ಆ ಚಂದ್ರ ಕೇಳಿದನು ನಿನ್ನ ಬೆಳಕು ಸಾಲ
ನೀ ನನ್ನವಳೇ ನಿನ್ನ ಬಿಟ್ಟು ನಂಗೆ ಬೇರೆ ಯಾರು ಕಾಣುತಿಲ್ಲ
ನೀ ನನ್ನವಳೇ ಈ ಹೃದಯದಲ್ಲಿ ನೀ ಮುಗಿಯದಂತ ಕಾಲ
ನಾ ಯಾರಿಗೂ ಹೇಳದ ಕನಸಿದೆ ಬರಿ ನಿನ್ನ ವೀಕ್ಷಣೆ ನಡೆದಿದೆ
ನೀ ಹೇಳದ ವಿಷಯವು ತಲುಪಿದೆ ಆನಂದವೇ ಎದುರಿದೆ
ಸಂಚಾರಿಯೇ ಸಂಗಾತಿಯೇ
ಸಂಚಾರಿಯೇ ಮೈ ಸವರೋ ಗಾಳಿಯೇ
ನೀ ನನ್ನವಳೇ ಎಷ್ಟೇ ನೋಡಿದರು ಇನ್ನು ಮುಗಿಯುತಿಲ್ಲ
ನೀ ನನ್ನವಳೇ ಆ ಚಂದ್ರ ಕೇಳಿದನು ನಿನ್ನ ಬೆಳಕು ಸಾಲ
ನೀ ನನ್ನವಳೇ ನಿನ್ನ ಬಿಟ್ಟು ನಂಗೆ ಬೇರೆ ಯಾರು ಕಾಣುತಿಲ್ಲ
ನೀ ನನ್ನ ಮಳೆ ದಿನವೆಲ್ಲಾ ನಾನು ಅದರಲ್ಲೇ ನೆನೆಯಲಾ.