Nee Theredhare lyrics, ನೀ ತೆರೆದರೆ the song is sung by Nakul Abhyankar, Sangeetha Ravindranath from Swagatha Nanna Lokake. Nee Theredhare Dance soundtrack was composed by Karan B Krupa with lyrics written by Jayanth Kaikini.
ನೀ ತೆರೆದರೆ Lyrics in Kannada
ನೀ ತೆರೆದರೆ ಕನಸಿನ ಕದವನು
ನಾ ಕದಿಯುವೆ ಹೃದಯದ ಪದವನು
bharatlyrics.com
ಮರಳಿ ಬಂತು ಜೀವದಿ
ನವಿರಾಗಿ ಜೀವವೆ
ಅಗಲಿ ನಿನ್ನ ಎಂದಿಗೂ
ಇರಲಾರೆ ಪ್ರೇಮವೇ
ಚಿಗುರಿ ನೂರು ಭಾವನೆ
ಬಿರಿದು ಹೂವಾಯ್ತು ಮನಸ್ಸು
ಬಿಡದೆ ನನ್ನ ಬಂಧಿಸಿ
ಮಧುರಜೂಮಾನೆ ವಿಧಿಸು
ಹೊಳಪು ತಾ ಬಂತು ಕಣ್ಣಲು
ದಿನವೂ ನಾ ನಿನ್ನ ನೋಡಲು
ಕಳೆದು ಮತ್ತೆ ಸಿಕ್ಕುತಾ
ತಿಳಿಯಿತು ಪ್ರೀತಿ ಬೆಲೆಯಾ
ಮಿನುಗೋ ಚಂದ್ರನಲ್ಲಿಯೋ
ಹನಿಗಳ ಸಣ್ಣ ಕಲೆಯು
ನೆಪವೂ ಬೇಕೇನು ಈಗಲೂ
ಮನದ ಮಾತನ್ನು ಹೇಳಲು
ಜೀವ ಭಾವ ನಿನ್ನದು
ನೀ ತೆರೆದರೆ ಕನಸಿನ ಕದವನು
ಹಗುರವೀಗ ಮೈಮನ
ಹುರುಪಿನ ಗಾಳಿ ಸುಳಿದು
ಅರಳುವಾಗ ಖಾತುರ
ಇರುಳಿಗೂ ಕೂಡ ತಿಳಿಯದು
ಅರಿತು ಒಂದಾದ ಜೀವಕೆ
ಒಂದೇ ಸಂದೇಹ ಏತಕೆ
ಸನಿಹ ನೀನು ಇದ್ದರೆ
ಬರದೂ ಕಾರ್ಮೋಡ ಮಳೆಗೆ
ಉಸಿರಿನಲ್ಲಿ ಗಂಧವು
ನೆಲವು ಮಿಂದಂತೆ ಮಳೆಗೆ
ನಲಿವು ನೋವೆಲ್ಲ ಸೇರಿಯ
ಚೆಲುವೂ ಸಂಗಾತ ದಾರಿಗೆ
ನೀನೆ ನನ್ನ ದೇವತೆ
ನೀ ತೆರೆದರೆ ಕನಸಿನ ಕದವನು
ನಾ ಕದಿಯುವೆ ಹೃದಯದ ಪದವನು.