Neenu Nambo Naale lyrics, ನೀನು ನಂಬೋ ನಾಳೆ the song is sung by Jaskaran Singh from Anshu soundtrack was composed by K C Balasarangan with lyrics written by Mahendra Gowda.
ನೀನು ನಂಬೋ ನಾಳೆ Neenu Nambo Naale Lyrics in Kannada
ನೀನು ನಂಬೂ ನಾಳೆ ನೀರ ಮೇಲೆ ಗುಳ್ಳೆ
ಬಿಂಬ ಕಾಣೋ ವೇಳೆ ನಿಜವೂ ಒಂದು ಸುಳ್ಳೇ
ಅಲೆಮಾರಿ ಮುಗಿದ ದಾರಿ
bharatlyrics.com
ಈ ಅಲೆಗಳೆದುರು ಈ ಮರಳಗೂಡು
ತಾ ಒಪ್ಪುತಲಿದೆ ಸೋಲು
ಆ ಕನಸು ನಿನದು ತಾ ಕರಗಿ ಕರಗಿ
ಈ ಕಂಬನಿಯ ಪಾಲು
ನಿಲ್ಲದ ಹುಡುಕಾಟಕೆ ತನದೆ ಹುಡುಗಾಟವು
ಅನ್ನೊ ಹಳೆಪಾಠವೇ ಬದುಕು
ನೀನು ನಂಬೂ ನಾಳೆ
ಕೈ ತುತ್ತದು ತಾನೆಂದು ಬೆರಳ ತುದಿ ಜಾರುತ್ತ
ಬಿದ್ದಾಗದೆ ಅದೇ ಗೊತ್ತಾದ ಹಸಿವೆ
ಈವತ್ತಿಗು ನಾ ಅಲೆದೆ ನಿಗೂಢ ಹುಡುಕಾಡುತ್ತ
ಸಿಗಬಹುದೆ ಆ ತುತ್ತು ತುಸುವೆ
ನಿನ್ನವರೆ ನಿನಗಿಂದು ಪಾಠ ಕಲಿಸಿದರೂಂದು
ಯಾರು ನಿನ್ನವರಲ್ಲಾ ತಿಳಿಯೇ ನಾ ಒಂಟಿ ಎನ್ನುತ್ತಾ
ಆ ಮುಗಿಲು ತಾ ಬರೆದ ಕಿರುಪತ್ರದಾಕ್ಷರ ಮಳೆಯೇ
ಆ ಪುಣ್ಯ ಕಲೆತು ಮರೆತ ಪಾಪ ಆ ಕ್ಷಣದ ಸೆಳೆತ
ಕರ್ಮ ತಾ ಉಳಿದ ಗಣಿತ ಅರಿಯೇ
ಆ ಹುಟ್ಟ್ ಎತಕೆ ಮರಣ ಸಹಿತ
ಸಾವೇ ಏತಕೆ ಕರುಣೆ ಸಹಿತ
ಬದುಕೆನ್ನುವ ಕುರುಡು ಕುಣಿತ ಸರಿಯೇ
ಸುಳಿಗೆ ಸಿಲುಕಿ ಸುಳಿಯ ಹುಡುಕೋ ಅಂತ್ಯವಿರದ ಸಂತೇ
ನೀನು ನಂಬೂ ನಾಳೆ
ನೀರ ಮೇಲೆ ಗುಳ್ಳೆ
ಬಿಂಬ ಕಾಣೋ ವೇಳೆ
ನಿಜವೂ ಒಂದು ಸುಳ್ಳೇ
ಅಲೆಮಾರಿ ಮುಗಿದ ದಾರಿ
ಈ ಅಲೆಗಳೆದುರು ಈ ಮರಳಗೂಡು
ತಾ ಒಪ್ಪುತಲಿದೆ ಸೋಲು
ಆ ಕನಸು ನಿನದು ತಾ ಕರಗಿ ಕರಗಿ
ಈ ಕಂಬನಿಯ ಪಾಲು
ನಿಲ್ಲದ ಹುಡುಕಾಟಕೆ ತನದೆ ಹುಡುಗಾಟವು
ಅನ್ನೊ ಹಳೆಪಾಠವೇ ಬದುಕು
ನೀನು ನಂಬೂ ನಾಳೆ