Neenu Nannavale lyrics, ನೀನು ನನ್ನವಳೇ the song is sung by Chandan Shetty from Chandan Shetty. Neenu Nannavale Love soundtrack was composed by Chandan Shetty with lyrics written by Chandan Shetty.
ನೀನು ನನ್ನವಳೇ Lyrics in Kannada
ನನಗಂತ ಬರುವವಳು ನೀನೇ ತಾನೆ
ನನ್ನ ಈ ಪುಟ್ಟ ಹೃದಯವಿದು ನಿಂದೆ ತಾನೇ
ಕಾದಿರುವೆ ನಿನಗಾಗಿ ಕಾದಿರುವೆ ಎಲ್ಲ ಮರೆತು
ನಿನ್ನ ಕುಳಿತು ನಿನಗಾಗೆ
bharatlyrics.com
ನನ್ನವಳೇ ನೀನು ನನ್ನವಳೇ
ಮನಸೊಳಗೆ ಮನೆಮಾಡಿ ನಿನಗಾಗಿ
ಕಾಯುತ ನಾನು ಕುತಿರುವೆ
ಹಗುರಾಗಿದೆ ಹೃದಯ ಮಗುವಾಗಿದೆ
ಉಸಿರು ನಿನ್ನ ನೋಡಿ ಮನಸೋತು ಸಿಹಿಯಾಗಿದೆ
ಕಳುವಾಗಿದೆ ಅಳುವು ಕಳುವಾಗಿದೆ
ಯಾಕೋ ನಿನ್ನ ನೋಡಿ ಮಾತೆಲ್ಲ ಸ್ವರವಾಗಿದೆ
ಅಭಿರಾಮ ನಾನು ಅಭಿಸಾರಿಕೆ ನೀನು
ಬೇಕೆ ಇರುವಂತ ಕನಸು ಶುರುವಾಯಿತು
ಕಳೆದ ಅಷ್ಟು ಜನುಮ ಜೊತೆಯಾಗಿದ್ದೆ
ಮುಂದಷ್ಟು ಜನುಮದಲ್ಲಿ ಜೊತೆಯಾಗಿರುವೆ
ನನ್ನವಳೇ ನೀನು ನನ್ನವಳೇ
ಮನಸೊಳಗೆ ಮನೆಮಾಡಿ ನಿನಗಾಗಿ
ಕಾಯುತ ನಾನು ಕುತಿರುವೆ
ಕೇಳದು ಏನು ಕಾಣದು
ನಿನ್ನ ಜೊತೆಯಲ್ಲಿ ಇರುವಾಗ ಭಯವಾಗದು
ಸೇರದು ಹಸಿವೆ ಆಗದು
ನಿನ್ನ ಗುಂಗಲ್ಲಿ ಬೇರೆನು ನೆನಪಾಗದು
ಆ ಸೂರ್ಯ ನಾನು ಈ ಭೂಮಿ ನೀನು
ನೀ ನನ್ನ ಮುಂದೆ ನಾ ಬೆನ್ನ ಹಿಂದೆ
ದಿನವೆಲ್ಲ ನಿ ನನ್ನ ಮುದ್ದಿಸಬೇಕು
ನಾ ಹೋದಲ್ಲೆಲ್ಲ ನೀ ಇರಲೇಬೇಕು
ನನ್ನವಳೇ ನೀನು ನನ್ನವಳೇ
ಮನಸೊಳಗೆ ಮನೆಮಾಡಿ ನಿನಗಾಗಿ
ಕಾಯುತ ನಾನು ಕುತಿರುವೆ.