Ondhe Maathali Helodaadare lyrics, ಒಂದೇ ಮಾತಲಿ ಹೇಳೋದಾದರೆ the song is sung by Shreya Ghoshal, Sonu Nigam from Pyaar. Ondhe Maathali Helodaadare Love soundtrack was composed by Palani D Senapati with lyrics written by Kaviraj.
ಒಂದೇ ಮಾತಲಿ ಹೇಳೋದಾದರೆ Ondhe Maathali Helodaadare Lyrics in Kannada
ಒಂದೇ ಮಾತಲಿ ಹೇಳೋದಾದರೆ
ನಾ ನಿನ್ನ ಪ್ರೀತಿಸುವೆ
ನಾ ನಿನ್ನ ಪ್ರೀತಿಸುವೆ
ನೀ ನನ್ನ ಶ್ವಾಸ
ನೀ ನನ್ನ ವಿಶ್ವಾಸ
ನಿನ್ನಲ್ಲೆ ವಾಸ
ನೀ ನನ್ನ ಉಲ್ಲಾಸ
ನನ್ನೆಲ್ಲ ಆಸೇಗು
ನಿಂದೇನೆ ಆಕಾರ
ಈ ಜೀವದಾ ತುಂಬಾ
ನಿಂದೇನೆ ಝೇಂಕಾರ
ಒಂದೇ ಮಾತಲಿ ಹೇಳೋದಾದರೆ
ನಾ ನಿನ್ನ ಪ್ರೀತಿಸುವೆ
ನಾ ನಿನ್ನ ಪ್ರೀತಿಸುವೆ
ಸಂತೋಷವೇನು
ಸಲ್ಲಾಪವೇನು
ನನ್ನಲ್ಲೆ ನೀನು
ಇರುವಾಗ ಇನ್ನು
ನೀ ಯಾರು ನಂಗೇ
ನಾ ಯಾರು ನಿಂಗೇ
ಇಷ್ಟೊಂದು ನೀನು
ಅತ್ಮೀಯನೇಕೆ
ಅನುಮಾನವೇನು
ಅನುರಾಗಿ ನಾನು
ಅನುಗಾಲ ನಿನ್ನ
ಅನುಯಾಯಿ ಇನ್ನು
ಮೇಳೈಸಿದಂತೆ
ಈ ಭೂಮಿ ಭಾನು
ನಿನಗಾಗಿ ನಾನು
ಒಂದೇ ಮಾತಲಿ ಹೇಳೋದಾದರೆ
ನಾ ನಿನ್ನ ಪ್ರೀತಿಸುವೆ
ನಾ ನಿನ್ನ ಪ್ರೀತಿಸುವೆ
bharatlyrics.com
ಈ ನಿನ್ನ ಕೈಯ್ಯಲ್ಲಿ
ಕೈಯಿಟ್ಟ ವೇಳೇಲಿ
ಹೂವಾಯ್ತು ಮುಳ್ಳಿಲ್ಲಿ
ನಾ ಸಾಗೋ ಹಾದೀಲಿ
ನಾ ಕಂಡ ಕೋಟಿ
ಕನಸನ್ನು ದಾಟಿ
ನೀನಾದೆ ಭೇಟಿ
ಈ ಜೀವ ಲೂಟಿ
ಅತಿಯಾದ ಪ್ರೀತಿ
ಸೊಗಸಾದ ಭೀತಿ
ಹೊಸದೇನೋ ಕಾಂತಿ
ಸುರಿದಂತೆ ಸ್ವಾತಿ
ಈ ತೋಳಿನಲ್ಲೇ
ಬೆರೆತಾಗ ಪೂರ್ತಿ
ಮಹಾ ಮನ ಶಾಂತಿ
ಒಂದೇ ಮಾತಲಿ ಹೇಳೋದಾದರೆ
ನಾ ನಿನ್ನ ಪ್ರೀತಿಸುವೆ
ನಾ ನಿನ್ನ ಪ್ರೀತಿಸುವೆ.
