Ye Maaraya lyrics, ಏ ಮಾರಾಯ the song is sung by Mangli, Kapil Kapilan from Maarnami. Ye Maaraya Love soundtrack was composed by Charan Raj with lyrics written by Pramod Maravante.
ಏ ಮಾರಾಯ Ye Maaraya Lyrics in Kannada
ಅರೆರೆ ಎಂತದೊ ರಗಳೆ ಆಗಿದೆ
ಅವನ ನೋಡಿದ ಕೂಡಲೆ
ಹಸಿದ ಕಂಗಳು ಬಲೆಯ ಬೀಸಿದೆ
ಸಿಲುಕಬಾರದೆ ಸುಮ್ಮನೆ
ಈ ಹವಾಮಾನ ಬಿಗುಮಾನ ತಂದು ಸೋಕಿದೆ
ಆ ಅನುರಾಗದನುವಾದ ನೀನೆ
ನಿನ್ನ ನಯವಾದ ನೋಟಾನೆ ಬಲುಸ್ವಾದ
ನಾ ಹೇಗೆ ಮಾಡಲಿ ಹೇಳು ವಾದ
ಏ ಮಾರಾಯ ಎಂತ ಗೊತ್ತ
ನಾ ಸುತ್ತಿ ನಿನ್ನ ಸುತ್ತಾ
ಈ ಮಂಡೇನೆ ಹಾಳಾಗಿದೆ
ನಂಗ್ಯಾಕೆ ಬೇಕೀತ್ತಾ
ಏ ಮಾರಾಯ ಎಂತ ಗೊತ್ತಾ
ನೀ ಎಂತಕೊ ಬರ್ತಾ ಬರ್ತಾ
ಈ ಜೀವಾನೆ ತಿಂತಾ ಇದ್ದಿ
ನಂಗ್ಯಾಕೆ ಬೇಕೀತ್ತಾ
bharatlyrics.com
ಕುಣಿಯೊ ತವಕ
ದಣಿಯೊ ತನಕ
ಎದೆಯ ಒಳಗೆ
ಅಳತೆ ಸಿಗದ ಪುಳಕ
ನಾ ಗಾಳಿಪಟವಾಗಿ
ಹಾರಾಡೊ ಹೊತ್ತಲಿ
ನೀ ಹಕ್ಕಿಯಾಗಿ ನಂಗೆ
ಜೊತೆಯಾಗು ಬಾನಲ್ಲಿ
ಮೊದಲ ಬಾರಿ ಇಂತ ಗಾಳಿ
ನಾ ಯಾಕೆ ಈ ತರ ಹೋದೆ ತೇಲಿ
ಅರೆರೆ ಎಂತದೊ ರಗಳೆ ಆಗಿದೆ
ಇವಳ ನೋಡಿದ ಕೂಡಲೆ
ಹಸಿದ ಕಂಗಳ ಬಿಸಿಯ ದಾಳಿಗೆ
ಕರಗಿ ಹೋದೆನು ಮೆಲ್ಲಗೆ
ಈ ಹವಾಮಾನ ಬಿಗುಮಾನ ತಂದು ಸೋಕಿದೆ
ಆ ಅನುರಾಗದನುವಾದ ನೀನೆ
ನಿನ್ನ ನಯವಾದ ನೋಟಾನೆ ಬಲುಸ್ವಾದ
ನಾ ಹೇಗೆ ಮಾಡಲಿ ಹೇಳು ವಾದ
ಏ ಮಾರಾಯ ಎಂತ ಗೊತ್ತ
ನಾ ಸುತ್ತಿ ನಿನ್ನ ಸುತ್ತಾ
ಈ ಮಂಡೇನೆ ಹಾಳಾಗಿದೆ
ನಂಗ್ಯಾಕೆ ಬೇಕೀತ್ತಾ
ಏ ಮಾರಾಯ ಎಂತ ಗೊತ್ತಾ
ನೀ ಎಂತಕೊ ಬರ್ತಾ ಬರ್ತಾ
ಈ ಜೀವಾನೆ ತಿಂತಾ ಇದ್ದಿ
ನಂಗ್ಯಾಕೆ ಬೇಕೀತ್ತಾ.
