ಆಧೇ ನೀನು ಧುಶ್ಯಂತ Aadhe Neenu Dhushyantha Lyrics in Kannada
ಆದೆ ನೀನು ದುಷ್ಯಂತಾ
ಕಾಯೋ ನೋವು ನಿಂಗೊತ್ತಾ
ನಮ್ಮಾ ಪ್ರೀತಿ ಸುಳ್ಳು ಆಗೋಯ್ತಾ
ಬಂದೇ ಬರುವೆ ನೀನಂತ
ಇನ್ನೂ ಕಾಯೋಕಾಗುತ್ತಾ
ಕಾಲ ನಿನ್ನ ನಂಬಿ ನಿಲ್ಲುತ್ತಾ
ಅನುಮಾನ ಅನ್ನೋದು
ಬಿಸಿ ಹಾಲು ಇದ್ದಂತೆ
ಅವಮಾನ ತಾಳೋದು
ಕುಲುಮೇಲಿ ಬೆಂದಂತೆ
ಚಿಂತೆ ಎಂಬ ಬಲೆಗೆ ಸಿಲುಕಿರುವೇ
ಬಿಡಿಸಲು ನನ್ನ ಎಂದು ನೀ ಬರುವೆ
ಬಿಡಿಸಲು ನನ್ನ ಎಂದು ನೀ ಬರುವೆ?
ಗಿಡ ಬಳ್ಳಿ ಕೇಳುತಾವೇ
ಕರುಳ ಬಳ್ಳಿಯ ಕಥೇ ನಾ
ಬೆಟ್ಟ ಗುಡ್ಡ ನೋಡುತಾವೇ
ನಾನು ಪಡುವ ವ್ಯಥೇ ನಾ
ಮಾತು ನೀಡದೆ ಭಗವಂತ
ಮೋಸ ಮಾಡಿದೆ ಯಾಕಯ್ಯ
ಅಳುವೇ ತುಂಬಿದ ಎದೆ ಮಾತ
ಹೇಳಲಾಗದು ಯಾಕಯ್ಯ
ಪ್ರಶ್ನೆ ಕೇಳೋ ಮಂದಿಗೆಲ್ಲಾ
ಏನೂ ಉತ್ತರ ಹೇಳೋದು
ಕಾಲ ಸರಿದು ಹೋಗುವಾಗ
ಇನ್ನೂ ಹೇಗೆ ಕಾಯೋದು
ಮೊದಲಾ ಒಲವಿದು ನಿಜವೇ ನನ್ನ ಇನಿಯಾ
ಅಗಲಿ ಇರುವುದು ಒಲವಿಗಿದು ಸರಿಯಾ
ಆದೆ ನೀನು ದುಷ್ಯಂತಾ
ಕಾಯೋ ನೋವು ನಿಂಗೊತ್ತಾ
ನಮ್ಮಾ ಪ್ರೀತಿ ಸುಳ್ಳು ಆಗೋಯ್ತಾ
ನನ್ನ ಗರ್ಭದಾ ಗೂಡಲಿ
ಅರಳಿದೆ ಪುಟ್ಟ ಹೂವು
ನಾವು ಮಾಡಿದ ಪ್ರೀತಿ
ನೆನಪು ಮಾಡಲೆಂದೆಂದೂ
ಅರಳಿ ಭುವಿಗೆ ಬಂದಾಗ
ಉತ್ತರ ಹೇಳಲಿ ಏನಂತ?
ಒಗಟು ಆಗಿದೆ ಈ ಲೋಕ
ಬೇಗನೆ ಬಾರೋ ಗುಣವಂತ
ಕಣ್ಣಾ ಮುಚ್ಚೆ ಕಾಡೇ ಗೂಡೆ
ಆಡಬೇಡ ಪರಮಾತ್ಮ
ಬಂದೇ ಬಿಡುವೆ ನಿನ್ನ ಬಳಿಗೆ
ಕರೆದುಕೊಳ್ಳೋ ಈ ಆತ್ಮ
ಎದೆಯಾ ತಳಮಳ
ತಿಳಿಯೋ ಪರಶಿವನೇ
ಹೃದಯಾ ತಡೆಯದು
ಮರಣ ಕೊಡೊ ಶಿವನೇ
ಹೃದಯಾ ತಡೆಯದು
ಮರಣ ಕೊಡೋ ಶಿವನೇ
ಹೃದಯಾ ತಡೆಯದು
ಮರಣ ಕೊಡೋ ಶಿವನೇ
Aadhe Neenu Dhushyantha Lyrics
Aade neenu dushyantaa
Kaayo novvu ningotthaa
Namma preethi sullu aagoythaa
Bandhe baruve neenanta
Innu kaayokaaguththaa
Kaala ninna nambi nilluttaa
Anumaana annodhu
Bisi haalu iddante
Avamaana taalodu
Kulumeli bendante
Chinthe emba balage silukiruve
Bidisalu nanna endu nee baruve
Bidisalu nanna endu nee baruve
bharatlyrics.com
Gida balli kelutaave
Karula balliya kathe naa
Betta gudda nodutaave
Naanu paduva vyathe naa
Maatu needade bhagavantha
Mosa maadide yaakayyaa
Aluve thumbida edeya maatha
Helalaagadu yaakayyaa
Prashne kelo mandigella
Yenu utthara helodu
Kaala saridu hoguvaaga
Innu hege kaayodu
Modala olavidu nijave nanna iniyaa
Agali iruvudu olavigidu sariya
Aade neenu dushyantaa
Kaayo novvu ningotthaa
Namma preethi sullu aagoythaa
Nanna garbhada goodali
Aralide putta hoovu
Naavu maadida preethi
Nenapu madalendendu
Arali bhuvige bandaaga
Uttara helali yenanthaa
Ogatu aagide ee loka
Begane baaro gunavantha
Kanna mucche kaade goode
Aadabeda paramaathma
Bandhe biduve ninna balige
Karedhukollo ee aathma
Edeya thalamala
Thiliyo parashivane
Hrudaya thadeyadu
Marana kodu shivane
Hrudaya thadeyadu
Marana kodu shivane
Hrudaya thadeyadu
Marana kodu shivane
