ಗಗನದ ನೇಸರ Gaganada Nesara Lyrics in Kannada
ಗಗನದ ನೇಸರ ಒಲವಿನ ಸಾಗರ
ನಮಿಸಲು ದೇವರು ಅಪ್ಪ
ಕನಸಿನ ನಾವಿಕ ಬೆವರಿನ ಕಾಯಕ
ಬದುಕಿನ ಸೈನಿಕ ಅಪ್ಪ
ಕೂಲಿ ಇಲ್ಲ ಕೂಲಿಕಾರ
ಜೀವ್ನ ಪೂರ ಜೀತಗಾರ
ಕೂಲಿ ಇಲ್ಲ ಕೂಲಿಕಾರ
ಜೀವ್ನ ಪೂರ ಜೀತಗಾರ
ಕರುಳ ಬಳ್ಳಿಗೆ
ನೆರಳಾಗುವ ಹೆಮ್ಮರ ನೀನೇ ಎಲ್ಲಾ…
ಬೇರೆ ಇಲ್ಲಾ
ಗಗನದ ನೇಸರ ಒಲವಿನ ಸಾಗರ
ನಮಿಸಲು ದೇವರು ಅಪ್ಪ…
ತ್ಯಾಗದ ಹೆಸರಿಗಿವನು ಮೊದಲ ಪುಟದ ಮೊದಲ ಹೆಸರು
ಈತ ಚೆರಿತೇಯು
ರಾಜನ ಪದವಿ ಕೊಡಲು ಮಗನೆ ತನಗೆ ಸಕಲ ಎನ್ನೋ
ಈತನೇ ಘನತೇಯು
ತೋಳು ತೊಟ್ಟಿಲು ಕಾಲು ಮೆಟ್ಟಿಲು
ಕೊರಳೇ ಜೋಕಾಲಿ ಹೆಗಲೇರಿ ಸಂಚಾರಿ
ನಿನ್ನಾ ಬೆನ್ನೇ ನನಗೆ ಅಂಬಾರಿ
ಗಗನದ ನೇಸರ ಒಲವಿನ ಸಾಗರ
ನಮಿಸಲು ದೇವರು ಅಪ್ಪ…
bharatlyrics.com
ತನ್ನಯ ತನುವ ಸುಟ್ಟು
ಬೆಳಕು ಕೊಡುವ ನಮಗೆ ದಿನವು ನೇಸರ
ನೀನೇ ನೇಸರ
ಏತಕೋ ಅರಿಯ ನಾನು ದೇವರೆ ಮರೆತ
ನಿನ್ನ ಹೆಸರ ಬಾಳಿಗೆ
ನೀನೇ ದಿನಕರ
ಗುರುವು ನೀನೆ ವರವು ನೀನೆ
ಬಲವು ನೀನೆ, ಛಲವು ನೀನೆ
ನಿನ್ನಾ ಬೆನ್ನೇ ನನಗೆ ಅಂಬಾರಿ
ಗಗನದ ನೇಸರ ಒಲವಿನ ಸಾಗರ
ನಮಿಸಲು ದೇವರು ಅಪ್ಪ
ಕೂಲಿ ಇಲ್ಲ ಕೂಲಿಕಾರ ಜೀವ್ನ ಪೂರ ಜೀತಗಾರ
ಕೂಲಿ ಇಲ್ಲ ಕೂಲಿಕಾರ ಜೀವ್ನ ಪೂರ ಜೀತಗಾರ
ಕರುಳ ಬಳ್ಳಿಗೆ
ನೆರಳಾಗುವ ಹೆಮ್ಮರ ನೀನೇ ಎಲ್ಲಾ
ಬೇರೆ ಇಲ್ಲಾ.
