Hodirale Halagi Lyrics - Meghana Haliyal

Hodirale Halagi Lyrics - Meghana Haliyal

ಹೊಡಿರೆಲೇ ಹಲಗಿ Lyrics in Kannada

ಹೊಡಿರೆಲೇ ಹಲಗಿ
ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ
ತೆಗಿರಲೇ ನೆಟಗೆ

ಬಲಗೈಯ್ಯಾಗ ದೊಡ್ಡಕಡ್ಡಿ
ಯಡಗೈಯ್ಯಾಗ ಶಣ್ಣ ಕಡ್ಡಿ
ನಡು ಬಟ್ಟೇಲಿ ಚರ್ಮ ವಾದ್ಯ

ಬರ್ರ್ಯೆಲೇ ಗಂಗ್ಯಾ, ಬುದ್ಯಾ ನಿಂಗ್ಯಾ

ಹೊಡಿರೆಲೇ ಹಲಗಿ
ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ
ತೆಗಿರಲೇ ನೆಟಗೆ

ಒಂತೊಟ್ಟು ಎಣ್ಣಿನ ಒಳಘಾಕು
ನಿಂದಷ್ಟು ಫೀಲಿಂಗು ಹೊರಘಾಕು
ಗೆದ್ದಾಗ ತೊಡಿ ತಟ್ಟಿ ಕುಣಿಬಾಕು
ಪ್ರಶಸ್ತಿ ಎದೆ ತಟ್ಟಿ ಹಿಡಿಬಾಕು

ಕಡಮಿ ಕುಡಿದರು ಕುಡುಕ ಅಂತಾರ
ಹೆಚ್ಚಿಗೆ ಹೀರಲೇ ಮಗನ
ಅಮಲುಗಣ್ಣಲೆ ಸೀದಾ ನೋಡಲೇ
ಹ್ಯಾಂಗೆ ಕುಣಿತಾವು ಜಘನಾ

ನಿಮ್ಮ ಮೀಸಿಗೆ ನನ್ನ ಗಲ್ಲ
ಟಚಿಂಗ್ ಆದರ ಹಲ್ಲಾ ಗುಲ್ಲಾ
ನೀವು ಸಿಕ್ಕಿದ್ದ ನಮ್ಮ ಸೌಭಾಗ್ಯಾ
ಬರ್ರ್ಯೆಲೇ ರಂಗ್ಯಾ ಪರ್ಮ್ಯಾ ರಾಗ್ಯಾ

ಹೊಡಿರೆಲೇ ಹಲಗಿ
ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ
ತೆಗಿರಲೇ ನೆಟಗೆ

ಎತ್ತೆತ್ತಿ ಬಾಟ್ಲಿನ ಕೆಳಗಿಟ್ಟು
ತಿಳ್ಕಳ್ರಿ ಕೆಲವೊಂದು ಒಳಗುಟ್ಟು
ಎಣ್ಣಿಗು ಹೆಣ್ಣಿಗೂ ರೆಸ್ಪೆಕ್ಟು
ಕೊಟ್ರನ ಗಂಡ್ಸುರು ಪರ್ಫೆಕ್ಟು

ಪೋಲಿಯಾಗದ ಪ್ಯಾಲಿ ಜೀವನ
ಫಾಯದೆ ಇಲ್ಲಲೇ ಮಗನ
ದೀಡ ತಾಸಿನ ಮಟ್ಟಿಗೆ ನನ್ನ
ಆಗ್ತೀಯೇನಲೇ ಲಗನಾ

ಗ್ರೀನ್ ಸಿಗ್ನಲ್ ಮಂಜೂರಾತಿ
ನಾನ್ ಕೊಟ್ಮ್ಯಾಲೆ ಇನ್ನೆನೈತಿ
ಪಡ್ಕೊ ಬಾರಲೇ ಸುಖ ಸೌಲಭ್ಯ
ಬರ್ರ್ಯೆಲೇ ಬಸ್ಯಾ ಸುಕ್ಯಾ ನಾಗ್ಯಾ

bharatlyrics.com

ಹೊಡಿರೆಲೇ ಹಲಗಿ
ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ
ತೆಗಿರಲೇ ನೆಟಗೆ.

Hodirale Halagi Lyrics PDF Download
Print PDF      PDF Download

Leave a Reply