Jigari Dosta lyrics, ಜಿಗರಿ ದೋಸ್ತ the song is sung by Shivani Swami, Malu Nipanal. from Hulibeera. was composed by Veer Samarth lyrics written by Shivu Bhergi.
ಜಿಗರಿ ದೋಸ್ತ Jigari Dosta Lyrics in Kannada
ಜಿಗರಿ ದೋಸ್ತ್ ಜಿಗರಿ ದೋಸ್ತ್ ಹಳ್ಳಕ ಬಿದ್ದೆಲ್ಲೊ
ನೀ ಮದವಿ ಫಿಕ್ಸು ಆಗೋತನಕ ಚಂದಾಗಿದ್ದೆಲ್ಲೊ
ಜಿಗರಿ ದೋಸ್ತ್ ಜಿಗರಿ ದೋಸ್ತ್ ಹಳ್ಳಕ ಬಿದ್ದೆಲ್ಲೊ
ನೀ ಮದವಿ ಫಿಕ್ಸು ಆಗೋತನಕ ಚಂದಾಗಿದ್ದೆಲ್ಲೊ
ಮುಂಜಾನೆದ್ರ ಯಾವ್ ಹುಡ್ಗಿರ್ನ್ ನೋಡಾಕಗುದಿಲ್ಲೊ
ಸಂಜಿಯಾದ್ರಾ ಕಟ್ಟಿಕೊಂದ ಹೆಂಡ್ತಿ ಹೊರಗ ಬಿಡೋದಿಲ್ಲೊ
ಮುಂಜಾನೆದ್ರ ಯಾವ್ ಹುಡ್ಗಿರ್ನ್ ನೋಡಾಕಗುದಿಲ್ಲೊ
ಸಂಜಿಯಾದ್ರಾ ಕಟ್ಟಿಕೊಂದ ಹೆಂಡ್ತಿ ಹೊರಗ ಬಿಡೋದಿಲ್ಲೊ
ಜೀವದ ಗೆಳತಿ ಜೀವದ ಗೆಳತಿ ಹಳ್ಳಕ ಬಿದ್ದೆಲ್ಲೆ
ನೀ ಆಗಿದ್ದಾತು ಗಂಡನ ಮುಗದಾರ ಗಟ್ಟಿ ಹಿಡಕೊಳ್ಳೆ
ಜೀವದ ಗೆಳತಿ ಜೀವದ ಗೆಳತಿ ಹಳ್ಳಕ ಬಿದ್ದೆಲ್ಲೆ
ನೀ ಆಗಿದ್ದಾತು ಗಂಡನ ಮುಗದಾರ ಗಟ್ಟಿ ಹಿಡಕೊಳ್ಳೆ
ನಿನ್ನ ಅತ್ತಿಯ ಕೈಯಾನ ಅಧಿಕಾರೆಲ್ಲ ನೀನೆ ಕಸಗೊಳ್ಳೇ
ನೀ ಕಾಲ ಮ್ಯಾಲ ಕಾಲು ಹಾಕೊಂಡ್ ಲೆಕ್ಕ ಬರಕೊಳ್ಳೆ
ಜಿಗರಿ ದೋಸ್ತ್ ಜಿಗರಿ ದೋಸ್ತ್ ಹಳ್ಳಕ ಬಿದ್ದೆಲ್ಲೊ
ನೀ ಮದವಿ ಫಿಕ್ಸು ಆಗೋತನಕ ಚಂದಾಗಿದ್ದೆಲ್ಲೊ
ಮೇಕಪ್ ನ್ಯಾಗ ಹುಡ್ಗೆರ ಬಾರಿ ಛಲೋ ಇರತಾರ
ಬರ್ತಾ ಬರ್ತಾ ಹುಷಾರು
ದುರ್ಗವನಂಗ ಕಾಣ್ತಾರ
ಮದ್ವಿ ಮಾಡ್ಸ ಬ್ರೋಕರ
ಹುಡ್ಗ ಒಳ್ಳೆವ್ನ ಅಂತಾರ
ತಿಂಗಳದಾಗ ಅದಿನಾರ
ಎಣ್ಣೆ ಪಾರ್ಟಿ ಮಾಡ್ತಾರ
ಕೇಳಿದ್ದು ಕೊಡ್ಸ್ ಲಿಕ್ಕ ಕಣ್ಣಾಗ ನೀರ
ತವರು ಮನಿದೆ ಧಿಮಾಕು ಜೋರ
bharatlyrics.com
ಮನಿಯಾಗ ನಮ್ಮ್ ದೇನೆ ಕೆಲಸ ನೂರ
ಹೊರಗಡೆ ನಿಮ್ಮದೇನೆ ಕಾರುಬಾರ
ಕುಡಿದು ಬರತಿರಿ ದಿನ ಭರಪೂರ
ನಾವ್ ಕಾಯ್ ಬೇಕು ನಾಯಿಯಂಗ್ ಮನಿಮಾರ
ಈ ಗಂಡ್ಸರ್ ಬುದ್ಧಿ ಸುಮಾರ
ತವರಿಗೆ ಹೋದರ ಹುಷಾರ
ಮಾಜಿ ಲವರ್ ಇರ್ತಾರ
ತುಡುಗಿಲೆ ಬೇಲಿ ಹಾರ್ತಾರ
ಈ ಹೆಂಗ್ಸರ್ ಚ್ಯಾಳಿ ಹತ್ತಾರ
ಬೆಳ್ಳಿ ಬಂಗಾರ ಬೇಡತಾರ
ಕೊಡ್ಸಿರ ರೊಟ್ಟಿ ಮಾಡ್ತರ
ಇಲ್ಲಂದ್ರ ಬಾಂಢೆ ಹೋಗಿತಾರ
ಮೊದಲೆಲ್ಲ ರನ್ನಚಿನ್ನ ಅಂತಾರ ಗಂಡಸರ
ಬರಬರತ ಕೆಟ್ಟದಾಗಿ ಕರೀತಾರ ನಮ್ಮ ಹೆಸರ
ಹಗಲೆಲ್ಲ ದುಡದರು ಒಂದುಚೂರ
ಮಾರ್ಯಾದಿ ಕೊಡುದಿಲ್ಲ ಹೆಂಡತಿಯರ
ನಮ್ಮವು ರೊಕ್ಕ ನಮಗ ಸಾಲ ಕೊಡತಾರ
ನಾವು ಅಂಗಿ ಹರಕೊಳ್ಳುವಂಗ ಮಾಡತಾರ
