ಕದಿಯಲೇನು Kadiyalenu Lyrics - Chinmayi Sripada

Kadiyalenu lyrics, ಕದಿಯಲೇನು the song is sung by Chinmayi Sripada from Girki. Kadiyalenu Love soundtrack was composed by Veer Samarth with lyrics written by Jayanth Kaikini.

ಕದಿಯಲೇನು Lyrics in Kannada

ಕದಿಯಲೇನು ಮನದ ಮಾತು
ಹೃದಯದೀ ಕೂತು
ದೂರ ಹೇಗೆ ಇರಲಿ ನಾನು
ಸೆಳೆತಕೆ ಸೋತು

ಕಣ್ಣಮುಂದೆ ನೀನಿರೆ
ಬಾಕಿ ಎಲ್ಲಾ ಮರೆಯುವೆ
ನನ್ನ ಒಂಟಿ ಕನಸಿಗೆ
ನಿತ್ಯ ನಿನ್ನ ಕರೆಯುವೆ

ಬಡ ಹೃದಯಕೀಗ ಒಲವಿಗಿಂತ
ಉಂಟೇ ಹೇಳು ಬೇರೆ ನಿಧಿಯು

ಕದಿಯಲೇನು ಮನದ ಮಾತು
ಹೃದಯದೀ ಕೂತು
ದೂರ ಹೇಗೆ ಇರಲಿ ನಾನು
ಸೆಳೆತಕೆ ಸೋತು

ಮೈತುಂಬಾ ಏನೋ ಮಿಂಚು
ತುಟಿಯಲ್ಲಿ ಮಂದಹಾಸ
ಇರಲಿಲ್ಲ ಏಂದೂ ಇಂತ ಜೀವಂತಿಕೆ

ನಿನ್ನನ್ನು ಬಿಟ್ಟು
ಈಗ ಇನ್ನೇನು ತೋಚುತ್ತಿಲ್ಲ
ತುಂಬಾನೆ ಹಚ್ಚಿಕೊಂಡ ಈ ಜೀವಕೆ

bharatlyrics.com

ಹಲವು ನೆಪದಲಿ ನಿನ್ನ ಬಳಿಗೆ
ಸುಳಿವ ಬಯಕೆಯು ಹಗಲು ಇರುಳು

ಕನಸು ಮನಸಲೂ ಎಣಿಸದಿರುವ
ಮಧುರ ಅಲೆಗಳು ಮೂಡುತಿರಲು
ಬಣ್ಣಿಸು ನೀನು ರಮಿಸುವಾಗ
ಉಂಟೇ ಹೇಳು ಬೇರೆ ಖುಷಿಯು

ಕದಿಯಲೇನು ಮನದ ಮಾತು
ಹೃದಯದೀ ಕೂತು
ದೂರ ಹೇಗೆ ಇರಲಿ ನಾನು
ಸೆಳೆತಕೆ ಸೋತು

ಕಾಡುವ ನಿನ್ನ ಮೇಲೆ ತಕರಾರು ನೂರಾರುಂಟು
ಸಿಕ್ಕಾಗ ಎಲ್ಲಾ ಮಾಯ ತಾನಾಗಿಯೆ
ಒಂದಲ್ಲ ನೂರು ರೀತಿ ಅನುರಾಗ ತೋರು ನೀನು
ಹಾಗೆಲ್ಲ ಕೇಳೊದಿಲ್ಲ ನಾನಾಗಿಯೆ

ಈಜಲು ಬಯಸುತ ಎದೆಗೆ ಒರಗಿ
ನನ್ನ ಪಯಣವು ನಿನ್ನ ಒರಗಿ
ವರಸಿ ನನ್ನನ್ನು ಬರಲು ನೀನು
ನೋಡಿ ನಲಿಯುವೆ ನಿಂತು ಮರೆಗೆ

ಜೊತೆಗೆ ನಾವು ಕಳೆದ ಮೇಲೆ
ಉಂಟೇ ಹೇಳು ಬೇರೆ ಕಥೆಯು

ಕದಿಯಲೇನು ಮನದ ಮಾತು
ಹೃದಯದೀ ಕೂತು
ದೂರ ಹೇಗೆ ಇರಲಿ ನಾನು
ಸೆಳೆತಕೆ ಸೋತು.

Kadiyalenu Lyrics PDF Download
Print Print PDF     Pdf PDF Download