Ondu Sanna Thappanu lyrics, ಒಂದು ಸಣ್ಣ ತಪ್ಪನ್ನು the song is sung by Sanjith Hegde from Shardula. Ondu Sanna Thappanu Love soundtrack was composed by Sathish Babu with lyrics written by Arvind Koushik.
Ondu Sanna Thappanu Lyrics
Ondu sanna thappanu
Maadibidale naanu?
Devare kan mucchi kooruveya
Swalpa hottu neenu?
Ondu swalpa salugeya saalava
Needuve enu?
Ondu saari ninna usiranu
Seribidalenu?
Ondu sanna thappanu
Maadibidale naanu?
Devare kan mucchi kooruveya
Swalpa hottu neenu?
Sanje hottali santhe beedhili
Kai hididu nadeve ninna joteyalli
Maneya angaladi lruva hoo gidake
Nee neera haakalu raatri beladingalali
Heegondu aase ninna naachikege
Naa kaaranavaagabeku
Namma preetiya nodi aakaasha karagi
Maleyaagabeku
Ondu sanna thappanu
Maadibidale naanu?
Devare kan mucchi kooruveya
Swalpa hottu neenu?
Naalke dinadaataee namma baduku
Aadarenante eega
Iruvashtu kalaa heegene irali
Nammibbara ee anuraaga
Baaki ulisalla mundina janumakke
Ondishtu preetisuva kelasana
Ashtondu januma yaavaanige beku
Nillisiye biduva kaalaana
Ondu sanna thappanu
Maadibidale naanu?
Devare kan mucchi kooruveya
Swalpa hottu neenu?
ಒಂದು ಸಣ್ಣ ತಪ್ಪನ್ನು Lyrics in Kannada
ಒಂದು ಸಣ್ಣ ತಪ್ಪನ್ನು
ಮಾಡಿಬಿಡಲೇ ನಾನು?
ದೇವರೆ ಕಣ್ಣು ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು?
ಒಂದು ಸ್ವಲ್ಪ ಸಲುಗೆಯ ಸಾಲವ
ನೀಡುವೆ ಏನು?
ಒಂದು ಸಾರಿ ನಿನ್ನ ಉಸಿರನು
ಸೇರಿಬಿಡಲೇನು?
ಒಂದು ಸಣ್ಣ ತಪ್ಪನ್ನು
ಮಾಡಿಬಿಡಲೇ ನಾನು?
ದೇವರೆ ಕಣ್ಣು ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು?
ಸಂಜೆ ಹೊತ್ತಲ್ಲಿ ಸಂತೆ ಬೀದೀಲಿ
ಕೈ ಹಿಡಿದು ನಡೆವೆ ನಿನ್ನ ಜೊತೆಯಲ್ಲಿ
ಮನೆಯ ಅಂಗಳದಿ ಇರುವ ಹೂ ಗಿಡಕೆ
ನೀ ನೀರ ಹಾಕಲು ರಾತ್ರಿ ಬೆಳದಿಂಗಳಲಿ
bharatlyrics.com
ಹೀಗೊಂದು ಆಸೆ ನಿನ್ನ ನಾಚಿಕೆಗೆ
ನಾ ಕಾರಣವಾಗಬೇಕು
ನಮ್ಮ ಪ್ರೀತಿಯ ನೋಡಿ ಆಕಾಶ ಕರಗಿ
ಮಳೆಯಾಗಬೇಕು
ಒಂದು ಸಣ್ಣ ತಪ್ಪನ್ನು
ಮಾಡಿಬಿಡಲೇ ನಾನು?
ದೇವರೆ ಕಣ್ಣು ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು?
ನಾಲ್ಕೇ ದಿನದಾಟ ಈ ನಮ್ಮ ಬದುಕು
ಆದರೇನಂತೆ ಈಗ
ಇರುವಷ್ಟು ಕಾಲ ಹೀಗೇನೆ ಇರಲಿ
ನಮ್ಮಿಬ್ಬರ ಈ ಅನುರಾಗ
ಬಾಕಿ ಉಳಿಸಲ್ಲ ಮುಂದಿನ ಜನುಮಕ್ಕೆ
ಒಂದಿಷ್ಟು ಪ್ರೀತಿಸುವ ಕೆಲಸಾನ
ಅಷ್ಟೊಂದು ಜನುಮ ಯಾವನಿಗೆ ಬೇಕು
ನಿಲ್ಲಿಸಿಯೆ ಬಿಡುವ ಕಾಲಾನ!
ಒಂದು ಸಣ್ಣ ತಪ್ಪನ್ನು
ಮಾಡಿಬಿಡಲೇ ನಾನು?
ದೇವರೆ ಕಣ್ಣು ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು?