ಅಪ್ಪ Appa Lyrics - Sangeetha Rajeev

Appa lyrics, ಅಪ್ಪ the song is sung by Sangeetha Rajeev from Sangeetha Rajeev. Appa Sad soundtrack was composed by Sangeetha Rajeev with lyrics written by Pradyumna Narahalli.

ಅಪ್ಪ Lyrics in Kannada

ಅಪ್ಪಾ ಅಪ್ಪಾ, ಅನ್ನೋ ನನ್ನ ಕರೆ
ಎಲ್ಲಾ ಗೆಲ್ಲೋ ಆಸರೆ
ಕೇಳೋ ಮುಂಚೆ ಎಲ್ಲಾ ತರೋ ದೊರೆ
ಇಂದೇತಕೆ ನಿಂತೆ ಮರೆ

ಕನಸ ಕಾಯುವ ಶಕ್ತಿಯ ತುಂಬಿ ಕೊಟ್ಟೆ
ಒಮ್ಮೆ ನೀ ಎದುರಿಗೆ ಬಾ.. ಬೇಗ ಬಾ
ಗಾಳಿಯೇ ತಾನಾದರೂ ಉಸಿರಲಿ ಅಪ್ಪಾ
ತಾರೆಯೇ ತಾನಾದರೂ ಸೂರ್ಯನೇ ಅಪ್ಪಾ

ಈ ಮನ ನುಡಿಯುತಿದೆ
ನೀನು ಇತ್ತ ತೊದಲಿನಲೇ
ಜೀವನ ನಡೆಯುತಿದೆ
ನೀನು ಕೊಟ್ಟ ಪ್ರೀತಿಯಲೇ

bharatlyrics.com

ಆಸೆಯ ಗೆಲ್ಲುವ ಶಕ್ತಿಯ ತುಂಬಿ ಕೊಟ್ಟೆ
ಒಮ್ಮೆ ನೀ ಎದುರಿಗೆ ಬಾ
ಒಂದೇ ಒಂದು ಸಾರಿ ಬಾ

ನಾದವೇ ನಂದಾದರೂ ನಾಡಿಯು ಅಪ್ಪಾ
ಖ್ಯಾತಿಯೇ ನಂದಾದರೂ ಸ್ಫೂರ್ತಿಯು ಅಪ್ಪಾ
ಗಾಳಿಯೇ ತಾನಾದರೂ ಉಸಿರಲಿ ಅಪ್ಪಾ
ತಾರೆಯೇ ತಾನಾದರೂ ಸೂರ್ಯನೇ ಅಪ್ಪಾ

ಅಪ್ಪಾ ನನ್ನ ಅಪ್ಪು ಬಾ.

Appa Lyrics PDF Download
Print Print PDF     Pdf PDF Download