ಕಡಲಾ ಬಳಿಗೆ Kadala Balige Lyrics - Keerthan Holla, Linda Jose

ಕಡಲಾ ಬಳಿಗೆ Kadala Balige Lyrics in Kannada

ಕಡಲಾ ಬಳಿಗೆ ಮೋಡಾನೆ
ಬರುವ ಗಳಿಗೆ
ಮರಳ ಕರೆಗೆ ಆಗಾಗ
ಸುಳಿವಾ ಸೆರೆಗೆ

ಹಾರೋ ಹಕ್ಕಿಬಾನಿಗೆ
ಬೀಸೋ ಗಾಳಿ ಮಾತಿಗೆ
ದಾರಿ ತೋರೋಕೆಂದೆ ಬಂದಂತೆ

ಒಂದೇ ಊರ ಬೆನ್ನಿಗೆ
ಅಂಟಿಕೊಂಡ, ರಸ್ತೆಗೆ
ಒಂಟಿಯಾಗಿ ಹೋಗೋ ಹೊತ್ತು ನಿಂತಂತೆ

ಹೆಜ್ಜೇನ ಗೂಡಂತೆ ಹೃದಯ
ಮಂದಾರ ಹೀರೋದೆ ಸಮಯ
ಬಾಳ ದಾರೀನೆ ಸಿಹಿಯ.. ಹೇಳು

ಆಗಾಗ ಬೀಳೋದು ಕನಸಾ
ಆಗೋದ ಕಾಣೋದು ಕನಸಾ
ಹೇಗೆ ಹೇಳೋದು ಮನಸಾ

ಕಡಲಾ ಬಳಿಗೆ ಮೋಡಾನೆ
ಬರುವ ಗಳಿಗೆ
ಮರಳ ಕರೆಗೆ ಆಗಾಗ
ಸುಳಿವಾ ಸೆರೆ

bharatlyrics.com

ಮೋಡಾನೆ ಬಂದು ತಂತಾನೆ
ಮಣ್ಣಾ ಸಂತೈಸಿ ಹೋಗಿದೆ
ಯಾವೂರ ಬಂಧು ನೀನೆಂದು
ತಾನು ಮೋಡಾನ ಕೇಳಿದೆ

ಯಾವ ಹುಡುಕಾಟ
ಬದುಕನ್ನೋ ಪಯಣ
ಯಾರು ಬರುತ್ತಾರೆ ಸದಾ
ಸದಾ ಜೊತೆಯಲೇ

ಹೆಜ್ಜೇನ ಗೂಡಂತೆ ಹೃದಯ
ಮಂದಾರ ಹೀರೋದೆ ಸಮಯ
ಬಾಳ ದಾರೀನೆ ಸಿಹಿಯ
ಹೇಳು,

ಆಗಾಗ ಬೀಳೋದು ಕನಸಾ
ಆಗೋದ ಕಾಣೋದು ಕನಸಾ
ಹೇಗೆ ಹೇಳೋದು ಮನಸಾ

ಕಡಲಾ ಬಳಿಗೆ ಮೋಡಾನೆ
ಬರುವ ಗಳಿಗೆ
ಮರಳ ಕರೆಗೆ ಆಗಾಗ
ಸುಳಿವಾ ಸೆರೆಗೆ.

Kadala Balige Lyrics PDF Download
Print Print PDF     Pdf PDF Download

FAQs

The song Kadala Balige is from the Life of Nithin (LI.O.N).

The song Kadala Balige was sung by Keerthan Holla and Linda Jose.

The music for Kadala Balige was composed by Dhani.

The lyrics for Kadala Balige were written by Sukeerth Shetty.

The music director for Kadala Balige is Dhani.

The song Kadala Balige was released under the Anand Audio.

The genre of the song Kadala Balige is Love.

Leave a Reply

Your email address will not be published. Required fields are marked *