ಕನ್ನಡಿಗ (ಟೈಟಲ್ ಟ್ರ್ಯಾಕ್) Kannadiga (Title Track) Lyrics - Shiva Rajkumar

Kannadiga (Title Track) lyrics, ಕನ್ನಡಿಗ (ಟೈಟಲ್ ಟ್ರ್ಯಾಕ್) the song is sung by Shiva Rajkumar from Kannadiga. Kannadiga (Title Track) Dance soundtrack was composed by Ravi Basrur with lyrics written by Santhosh Ananddram.

ಕನ್ನಡಿಗ (ಟೈಟಲ್ ಟ್ರ್ಯಾಕ್) Lyrics in Kannada

ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ

ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ

bharatlyrics.com

ಕರು ಕರೆಯುವಂತ
ಕರುಣೆಯ ಪಂಥ
ಕರುಳಾಬಳ್ಳಿ ಈ ಕನ್ನಡ

ಕಲಿಸೋನ ಗತ್ತು ಕಲಿಯೋನ ಸ್ವತ್ತು
ಕಲಿಯಂತೆ ಕಲಿತೋನು ಕನ್ನಡ

ಅಂತರಂಗ ಶುದ್ಧಿ ಮಾಡೋ
ವಚನವೇ ಈ ಭಾಷೆ
ಜನಜಾಗೃತಿಯ ಅರಿವು ಮೂಡಿಸೋ
ಜನಪದ ಈ ಭಾಷೆ

ಭೇದವಿರದ ಕುಲವಿದು
ಕ್ರೋಧವಿರದ ಕಲೆಯಿದು
ದಯೆಗೆ ಧರ್ಮಸ್ಥಳವಿದು
ನಾಡು ಕನ್ನಡ

ಕಳುವಾಗದ ನಿಧಿ ಇದು
ಕೊನೆಯಾಗದ ನದಿ ಇದು
ಕನ್ನಡಿಗನ ವಿಧಿ ಇದು
ಮಾತನಾಡು ಕನ್ನಡ

ಮಾತೃಭಾಷೆ ತಾಯಿಯಂತೆ
ಕೊಟ್ಟ ಮಾತು ತಪ್ಪದಂತೆ
ಕಾಯುತಾಳೆ ನಮ್ಮ ಪುಣ್ಯಕೋಟಿ
ಕನ್ನಡ

ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ

ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ.

Kannadiga (Title Track) Lyrics PDF Download
Print Print PDF     Pdf PDF Download