Nan Amma lyrics, ನನ್ನಮ್ಮ the song is sung by Aniruddha Sastry from Khela. Nan Amma Sad soundtrack was composed by M. S. Thyagaraja with lyrics written by Manoj Sowgand.
ನನ್ನಮ್ಮ Nan Amma Lyrics Lyrics in Kannada
ಕಣ್ಣೆದುರು ಕಾಣೋ ದೈವ
ಕಣ್ಣೋರೆಸೋ ಕರುಣೆ ಜೀವ
ಕಾಯುವಳು ನುಂಗಿ ನೋವ
ನನ್ನಮ್ಮ
ಕೈ ತುತ್ತ ಪ್ರೀತಿ ಕೊಡುವ
ಕರೆಯುವ ಮೊದಲೇ ಬರುವ
ಕಂದ ಎಂದೂ ಕರೆವ
ನನ್ನಮ್ಮ
ಎದೆ ಹಾಲನು ನಿನ್ನ ಮಡಿಲನು
ಸರಿದೂಗುವ ಸ್ವರ್ಗ ಎಲ್ಲಿದೆ
ಜಗ ಲಾಲಿಸೋ ಪರ ಶಿವನಿಗೂ
ಈ ತಾಯಿಯ ಋಣ ಕಾಡಿದೆ
ದೇವರಿಗೂ ನೀ ದೊಡ್ಡವಳು
ಧರೆಯಲಿ ನೀನೆ ಮೊದಲು
ಅಮ್ಮ ಅಮ್ಮ ಓ ಅಮ್ಮ
ಅಮ್ಮ ಅಮ್ಮ ಓ ಅಮ್ಮ
ಅಮ್ಮ ಅಮ್ಮ ಓ ಅಮ್ಮ
ಅಮ್ಮ ಅಮ್ಮ ಓ ಅಮ್ಮ
ಕೈ ಹಿಡಿದು ನೀ ಬರೆಸೋ
ಸರಿ ತಪ್ಪನೂ ತಿಳಿಸೋ
ಮೊದಲ ಗುರುವು ನೀನೆ ಅಲ್ಲವೇ
ನಾ ಕೂಗುವ ಮುನ್ನ
ನೀ ಅಪ್ಪಿದೇ ನನ್ನ
ನಿನ್ನ ಪ್ರೀತಿಗೆ ಕೊನೆಯೇ ಇಲ್ಲವೇ
ಮರೆವೇ ಎಲ್ಲಾ ನನಗಾಗಿ
ನಗುವೇ ತಾನು ಮಗುವಾಗಿ
ಕೇಳಿಲ್ಲ ಎಂದು ಏನು ನಿನಗಾಗಿ
bharatlyrics.com
ನಿಸ್ವಾರ್ಥ ಜೀವವು ನೀನಮ್ಮ
ನಿನಗೆ ಸಾಟಿಯು ಯಾರಮ್ಮ
ನೀನು ಕೊಟ್ಟ ವರವು ಈ ಜನ್ಮ
ಯುಗ ಯುಗವೇ ಕಳೆದೊದರು
ತಾಯಿನೇ ನಿಜ ದೇವರು.
