ShathaShathamaanagalinda lyrics, ಶತಶತಮಾನಗಳಿಂದ the song is sung by Raghu Dixit. from Graamaayana. was composed by Poornachandra Tejaswi lyrics written by Poornachandra Tejaswi.
ಶತಶತಮಾನಗಳಿಂದ ShathaShathamaanagalinda Lyrics in Kannada
ಶತಶತಮಾನಗಳಿಂದ
ಮೊದಲ ಪಂಕ್ತಿಎಲೆ ಕೂತು
ತೆಗಿ ತೇಗಿ ಉಂಡವರೇ
ಸಾಕು ಸಾಕು ಎದ್ದೇಳಿ
ತಲೆ ತಲೆಮಾರುಗಳಿಂದ
ದುಡಿದು ಕೂಡ ಹಸಿದವರ
ಸರತಿ ಸಾಲು ದೊಡ್ಡದಿದೆ
ಏಳಿ ಏಳಿ ಮೇಲೇಳಿ
ಬೆವರ ಸುರಿಸಿ ದುಡಿದವರ
ರಕುತ ಕುಡಿವ ತಿಗಣೆಗಳೇ
ಅನ್ನ ತಿನ್ನುವ ಮುನ್ನ
ಹೇಳಿ ನಿಮ್ಮ ಶ್ರಮವೇನು
ಭಯವ ಬಡವನೆದೆಗಿಟ್ಟು
ಮತೀಯ ಜಗಳ ತಂದಿಟ್ಟು
ಊರು ಊರನೇ ಸುಟ್ಟು
ಬಕುತಿಯ ಹೆಸರಲ್ಲಿ ಸುಲಿದವರಾರೋ
bharatlyrics.com
ನೂರು ದೇವರನೆಲ್ಲ
ನೂಕಾಚೆ ದೂರ
ಈ ಭೂಮಿ ತಾಯ
ಪೂಜಿಸೋಣ ಬಾರ
ನೂರು ದೇವರನೆಲ್ಲ
ನೂಕಾಚೆ ದೂರ
ಈ ಭೂಮಿ ತಾಯ
ಪೂಜಿಸೋಣ ಬಾರ
ಉಗೇ ಉಗೇ ಉಗೇ ನಮ್ಮಮ್ಮಮ
ಉಗೇ ಉಗೇ ಉಗೇ ನಮ್ಮಮ್ಮಮ
ಉಗೇ ಉಗೇ ಉಗೇ ನಮ್ಮಮ್ಮಮ ಆ ಹಾ ಆ
ಕಣ್ಣ ನೀರನೇ ಉಂಡು
ಬೆಳೆಯುತ್ತಿದ್ದ ಗಿಡ ಒಂದು
ಸಣ್ಣ ಬೆಳಕ ಕಿಡಿಗಾಗಿ
ಕಾದು ಕುಳಿತಿದೆ
ನೆಲದ ನೋವನು ಹೀರಿ
ಹೆಪ್ಪುಗಟ್ಟಿದ ಮೋಡ
ಸಿಡಿಲ ಬೆಳಕನೆಷ್ಟು ದಿನ
ಒಡಲಲವಿತು ಇಡಬಹುದೇ
ಬೆವರ ಸುರಿಸಿ ದುಡಿದವರ
ರಕುತ ಕುದಿಯುವ ಮುನ್ನ
ಕಿತ್ತು ತಿನ್ನುವ ಜನರೇ
ಹುಡುಕಿ ನಿಮ್ಮ ಬಿಲವೆಲ್ಲಿ
ಭಯವ ಬಡವನೆದೆಗಿಟ್ಟು
ಸುಳ್ಳು ಭರವಸೆಯ ಕೊಟ್ಟು
ಊರು ಊರನೇ ಸುಟ್ಟು
ಬಕುತಿಯ ಹೆಸರಲ್ಲಿ ಸುಲಿದವರಾರೊ
ನೂರು ದೇವರನೆಲ್ಲ
ನೂಕಾಚೆ ದೂರ
ಈ ಭೂಮಿ ತಾಯಿ
ಪೂಜಿಸೋಣ ಬಾರ
ನೂರು ದೇವರನೆಲ್ಲ
ನೂಕಾಚೆ ದೂರ
ಈ ಭೂಮಿ ತಾಯಿ
ಪೂಜಿಸೋಣ ಬಾರ
ಉಗೇ ಉಗೇ ಉಗೇ ನಮ್ಮಮ್ಮಮ
ಉಗೇ ಉಗೇ ಉಗೇ ನಮ್ಮಮ್ಮಮ
ಉಗೇ ಉಗೇ ಉಗೇ ನಮ್ಮಮ್ಮಮ ಆ ಹಾ ಆ
