ಜಗದಾ ಜೋಳಿಯ Jagada Joliya Lyrics - Manojavvam Aatreya

Jagada Joliya Lyrics - Manojavvam Aatreya

Jagada Joliya lyrics, ಜಗದಾ ಜೋಳಿಯ the song is sung by Manojavvam Aatreya from Tom And Jerry. Jagada Joliya Sad soundtrack was composed by Mathews Manu with lyrics written by Athanyaa Rachana.

ಜಗದಾ ಜೋಳಿಯ Lyrics in Kannada

ಜಗದಾ ಜೋಳಿಯ ತೂಗೋ ಕೈಗಳೇ
ತಾಯಿ ದೇವರಲ್ಲವೇ
ಕಾಣೋ ದೇವರ ಸಾವು ನ್ಯಾಯವೇ

ಜಗದಾ ಜೋಳಿಯ ತೂಗೋ ಕೈಗಳೇ
ತಾಯಿ ದೇವರಲ್ಲವೇ
ಕಾಣೋ ದೇವರ ಸಾವು ನ್ಯಾಯವೇ

ಮುಗಿಲಾ ಜೋಗುಳ ನಿನ್ನ ದನಿಯಲೇ
ನಿನ್ನಾ ಸೆರಗಿನಂಚಲೇ
ನನ್ನ ಜೀವದ ಜೀರುಗಂಟಿಯೇ

bharatlyrics.com

ನೀ ಮುಡಿದು ನಗುವಾಗ ತಾನೇ
ಈ ಜೀವ ಹೂವಾಯ್ತು ತಾಯೇ
ಕೈ ಹಿಡಿದ ವಾತ್ಸಲ್ಯ ತೇರೇ
ಸಂಚಾರ ಮರೆತೋದ ವೇಳೆ

ಸಾಯಬೇಕೆ… ಸಾಗಬೇಕೆ…
ಹೇಳು ಹೀಗೆ… ಬಾಳಬೇಕೆ…
ಮಾತೆ ಮೌನಿ ಆದಳೇ…
ಇಲ್ಲಿ ಮಮತೆ ಮಣ್ಣು ಸೇರಿತೆ…

ಮುಗಿಲಾಚೆ ನೀ ನಿಂತರೂನೂ
ಕೈ ಬೀಸಿ ಕರಿಬೇಕು ನೀನು
ಮಗನಾಗಿ ನಿನ ತೋಳಿನಲ್ಲೆ
ಚಿರಕಾಲ ಇರಬೇಕು ನಾನು

ಕೂಗು ನೀನು… ಕೂಗು ನೀನು
ನಿನ್ನ ಮಗನ ಕೂಗೆ ಏನು
ಅಮ್ಮ ಎಂಬ ಹಸಿವಿಗೆ ನೀಡು
ನಿನ್ನ ಉಸಿರ ಅಂಬಲಿ

ಜಗದಾ ಜೋಳಿಯ ತೂಗೋ ಕೈಗಳೇ
ತಾಯಿ ದೇವರಲ್ಲವೇ
ಕಾಣೋ ದೇವರ ಸಾವು ನ್ಯಾಯವೇ.

Jagada Joliya Lyrics PDF Download
Print Print PDF     Pdf PDF Download

Leave a Reply

Your email address will not be published. Required fields are marked *