Naadasunaada lyrics, ನಾದಸುನಾದದ the song is sung by Shreya Ghoshal from Brindavihari. Naadasunaada Dance soundtrack was composed by Hesham Abdul Wahab with lyrics written by Dr. V. Nagendra Prasad.
ನಾದಸುನಾದದ Naadasunaada Lyrics in Kannada
ನಾದಸುನಾದದ ಪ್ರೇಮವಾ ನೀಡುವೆ
ನಾಟ್ಯವಿನೋದದ ಸೇವೆಯಾ ಮಾಡುವೆ
ಈ ಜೀವವೇ… ಜೀವಾರತಿ
ಈ ಭಾವವೇ… ಭಾವಾರತಿ
ನೀನೇ ಹೇಳು ನನ್ನ ಮಾಧವನೇ
ನಿನ್ನ ಮರೆತು ನಾನು ಬಾಳುವೆನೇ
ಪ್ರೇಮದಾನ ಮಾಡೋ ಕೇಶವನೇ
ತನುಮನ ಕಣಕಣ ಬಯಸಿದೆ ನಿನ್ನ ಒಲವೇ
ನಾದಸುನಾದದ ಪ್ರೇಮನಾ ನೀಡುವೆ
ನಾ ನೀಡುವೇ
ರೀ.. ರೀ.. ಸಾ.. ನೀ..
ನಿ ನಿ ಮ ಪ ಗ ಮ ರಿ ಸ ನಿ ಸ ಗ ಮ ಪ ನಿ ಸ
ಕೃಷ್ಣಾ ನೀ ಬೇಗನೇ ಬಾರೋ ಬೇಗ ಬಾ….
ಪ್ರಣಯಮಯ ಯಮುನೆಯಲ್ಲಿ ಈಜಾಡಿಸು
ನಿತ್ಯೋತ್ಸವ ಪ್ರೇಮೋತ್ಸವ ಆನಂದಿಸು
ಕರೆಯದೆ ಕನಸಲ್ಲೂ ಬರುವಾ ಸಖಾ
ಬರಬಾರದೆ ಬಾ ಎಂದು ಕೂಗಿದಾಗಲೂ
ಸನಿಹವ ಬೇಡೋ ಸೇವಕಿ ನಿನ್ನ ಮೀರಾ
ಮೀರೆನು ನೀ ಹಾಕಿದಾ ರೇಖೆ ಧೀರಾ
ಪ್ರೇಮ ಮೇರೆ ಮೀರಿ ಹೋದಾಗ
ಬೇರೆ ಏನು ಬೇಕು ವೈಭೋಗ
ಮುಗಿಯದೇ ಇರಲಿ ಒಲವಿನ ಸರಿಗಮ
ನಾದಸುನಾದದ ಪ್ರೇಮನಾ ನೀಡುವೆ
ನಾಟ್ಯವಿನೋದದ ಸೇವೆಯಾ ಮಾಡುವೆ
ನಾ ಮಾಡುವೆ….
ಮೀರಾ ಮಾಧವರ ಜನುಮಜನುದ
ಬೆಸೆದ ಜೀವಾತ್ಮ ಸಂಗಮ
ಯಾರು ನಡುವಲಿ ಬಂದು ನಿಂತರು
ಅಗಲದಾ ಪ್ರೇಮ ಅನುಪಮ
ಗಾನ ನಾಟ್ಯ ಜೀವನಾದವೆಲ್ಲ
ಪ್ರೇಮ ಕಾಮ ಹಾಡೋಕಾವ್ಯವೆಲ್ಲ
ಕೃಷ್ಣ ನಿಂಗೆ ಅರ್ಪಣಾಯ ನಮಃ
bharatlyrics.com
ನಾದಸುನಾದದ ಪ್ರೇಮನಾ ನೀಡುವೆ
ನಾಟ್ಯವಿನೋದದ ಸೇವೆಯಾ ಮಾಡುವೆ
ಈ ಜೀವವೇ… ಜೀವಾರತಿ
ಈ ಭಾವವೇ… ಭಾವಾರತಿ
ನೀನೇ ಹೇಳು ನನ್ನ ಮಾಧವನೇ
ನಿನ್ನ ಮರೆತು ನಾನು ಬಾಳುವೆನೇ
ಪ್ರೇಮದಾನ ಮಾಡೋ ಕೇಶವನೇ
ತನುಮನ ಕಣಕಣ ಬಯಸಿದೆ ನಿನ್ನ ಒಲವೇ
ಕೃಷ್ಣಾ ಬೇಗ ಬಾ.
