Ondhe Ondu Lyrics - K. S. Chithra, Jaskaran Singh

ಒಂದೇ ಒಂದು Ondhe Ondu Lyrics in Kannada

ಒಂದೇ ಒಂದು ಸಾಲಲ್ಲಿ ಹೇಳೋ ಪ್ರೀತಿ ಅಲ್ಲಾ
ಕೋಟಿ ಭಾಷೆ ಸಾಲೋದಿಲ್ಲ
ಒಂದೇ ಒಂದು ಹಾಡಲ್ಲಿ ಹಾಡೋ ಕಾವ್ಯ ಅಲ್ಲಾ
ರಾಗ ತಾಳ ಸಾಲೋದಿಲ್ಲ

ಆ ಕಾಳಿದಾಸನು
ಆದಿಕವಿ ಪಂಪಾನು
ಕುಮಾರವ್ಯಾಸನು ಕವಿರನ್ನನು

ಹೇಳದಾ ಬರೆಯದಾ
ಭಾವದಾ ಗ್ರಂಥಲೋಕವೇ
ನನ್ನ ಎದೆಯ ಪ್ರೇಮಪದ

ಒಂದೇ ಒಂದು ಸಾಲಲ್ಲಿ ಹೇಳೋ ಪ್ರೀತಿ ಅಲ್ಲಾ
ಕೋಟಿ ಭಾಷೆ ಸಾಲೋದಿಲ್ಲ
ಒಂದೇ ಒಂದು ಹಾಡಲ್ಲಿ ಹಾಡೋ ಕಾವ್ಯ ಅಲ್ಲಾ
ರಾಗ ತಾಳ ಸಾಲೋದಿಲ್ಲ

ಮಮಮ ಪಪ ಮಮಮ ಗಗರಿ ರಿರಿಗಗ ಮಮರಿ
ರಿರಿಗಸ ರಿರಿಗಸರಿ ಸಸರಿ ರಿರಿಸ

ಒಂದೊಂದು ಮಾತಲ್ಲು ಜೇನಂತೆ ಜಿನುಗೋದು
ಸವಿ ಪ್ರೇಮದ ಆಲಾಪದಾ ಮಧುರಾಕ್ಷರಾ
ಹೇಳುತ್ತಾ ಹೋದಂತೆ ಏನೇನೋ ಸಾಲೊಲ್ಲಾ
ಸಂವತ್ಸರಾ ಮನ್ವಂತರಾ ಕಲ್ಪಾಂತರಾ

bharatlyrics.com

ನಾನು ನಿನ್ನ ಸೇರಿ
ನಿನ್ನಂತೆ ಆಗಿ ಹೋದೆ
ಪ್ರೇಮವೆಂಬ ಮಾಯೆಯೇ ಸುಂದರಾ

ಸೀತಾರಾಮ ರಾಧೇಶ್ಯಾಮ ಇಷ್ಟೇ ಒಲವಾ ವ್ಯಾಕರಣ
ಅರ್ಧ ನಾನು ಅರ್ಧ ನೀನು ಸೇರಿ ಸಂಪೂರ್ಣ

ಒಂದೇ ಒಂದು

ಹೇಗಿತ್ತು ಹೇಳೀಗಾ ನೀ ನನ್ನ ಕಂಡಾಗ
ಆದಂತಹಾ ರೋಮಾಂಚನಾ ಆ ಕಂಪನಾ
ಆನಂದ ಆಶ್ಚರ್ಯ ಒಂದಾಗಿ ಆದಾಗ
ಬಿಡಿಸೇಳಲು ಹೇಳೆಲ್ಲಿದೆ ಮಾಪ೦ಕನಾ

ನಾನು ನೀನು ಒಂದು ಏಳೇಳು ಜನ್ಮ ಬಂಧು
ಅನ್ನುವಂತ ಭಾವನೆ ಬಾಳಿಗೆ

ಗೌರಿ ನೀನು ಶಂಕರ ನಾನು ಅರ್ಧನಾರೀ ತತ್ವನೆ
ಶಬ್ದ ನಾದ ಬೇರೆ ಬೇರೆ ಮಾಡೋದು ಹೇಗೆ

ಒಂದೇ ಒಂದು ಹಾಡಲ್ಲಿ ಹಾಡೋ ಕಾವ್ಯ ಅಲ್ಲಾ
ರಾಗ ತಾಳ ಸಾಲೋದಿಲ್ಲ
ಒಂದೇ ಒಂದು ಸಾಲಲ್ಲಿ ಹೇಳೋ ಪ್ರೀತಿ ಅಲ್ಲಾ
ಕೋಟಿ ಭಾಷೆ ಸಾಲೋದಿಲ್ಲ

ಮನಸೇ ನೀನು ರಂಗು ರಂಗೋಲೆ
ಮನಸೇ ನೀನು ತೂಗು ಉಯ್ಯಾಲೆ
ಮನಸೇ ನೀನು ಪ್ರೇಮದಾರಂಭ ಶಾಲೆ

ಒಲವೇ ನೀನು ಜೀವಸಂಚಾರ
ಒಲವೇ ನೀನು ಜೀವನಾಧಾರ
ಒಲವೇ ನೀನು ವೇದವೇದಾಂಗ ಸಾರ.

Ondhe Ondu Lyrics PDF Download
Print Print PDF     Pdf PDF Download

FAQs

The song Ondhe Ondu is from the Brindavihari.

The song Ondhe Ondu was sung by K. S. Chithra and Jaskaran Singh.

The music for Ondhe Ondu was composed by Hesham Abdul Wahab.

The lyrics for Ondhe Ondu were written by Dr. V. Nagendra Prasad.

The music director for Ondhe Ondu is Hesham Abdul Wahab.

The song Ondhe Ondu was released under the Anand Audio.

The genre of the song Ondhe Ondu is Love.

Leave a Reply

Your email address will not be published. Required fields are marked *