Yaaro Neenu lyrics, ಯಾರೋ ನೀನು the song is sung by Siddhartha Belmannu, Srilakshmi Belmannu from Border Diaries. Yaaro Neenu Love soundtrack was composed by Judah Sandhy with lyrics written by A S G.
ಯಾರೋ ನೀನು Yaaro Neenu Lyrics in Kannada
ಯಾರೋ ನೀನು ಯಾರೋ ನೀನು
ಊರು ಕೇರಿ ಗೊತ್ತಿಲ್ಲದೋನು
ಗದ್ದಲದ ಊರಿನಲ್ಲಿ
ಸದ್ದಿಲ್ಲದೇ ನನ್ನ ಗೆದ್ದೋನು
ಯಾರೋ ನೀನು ಯಾರೋ ನೀನು
ಊರು ಕೇರಿ ಗೊತ್ತಿಲ್ಲದೋನು
ಹಿಡಿವೇ ನಿನ್ನ ಕಿರುಬೆರಳನ್ನ
ನೀ ಇಡುವ ಹೆಜ್ಜೆಯಲ್ಲಿ
ನಾ ಜೊತೆಗೆ ಸಾಗಲೇ
ನೀನು ಒಪ್ಪೋ ಮೊದಲೇನೇ
ನಿನ್ನೊಮ್ಮೆ ಅಪ್ಪಲೇ
ಹಗಲಲ್ಲೂ ಕಾಣೋ ತಾರೆಯೇ…
ಹಗಲಿರುಳೂ ನಾ ನಿನ್ನೆ ನೋಡಲೇ
ಜೊತೆ ಜೊತೆ ಜೊತೆಗೆ ಬೆಸೆಯುತ ಬೆಳೆದು
ಫಸಲನು ಕೊಡುವ ಪೈರಾಗಿರುವ
ಪರಿಪರಿ ನೆನೆದು ಪದಗಳ ಹೊಸೆದು
ಪರಿಚಿತವಾದ ಹಾಡಾಗಿರುವ
ಜಾಲಿಯ ಮುಳ್ಳೂ … ಸೋಕಿದರೂನು
ಹೂವಾಗುವುದೂ… ಜೊತೆಗಿರೆ ನೀನು
ಮರೆಯದ ಕನಸೂ… ಮರೆತೋಗಿಹುದು
ಕಣ್ಣೆದುರಲ್ಲಿ… ನಗುತಿರೆ ನೀನು…
ಜೋಳದ ತೆನೆ ಜೊತೆಗೆ
ಅವರೇ ಹೂ ನಕ್ಕಂತೆ
ನಾ ನಿನ್ನ ಬದಿಯಲ್ಲಿ ನಿನ್ನ ನಗುವಾಗಿರುವೆ
ನೀನು ನನ್ನ ಬದುಕಲ್ಲಿ ಮಗುವಂತಾಗಿರುವೆ
bharatlyrics.com
ಒಲವಾ ಹಂಬಲದಿ
ಹಸಿದಿರುವಾ ತಬ್ಬಲಿಗೆ
ಉಸಿರಾಟವನಿತ್ತಾ ಅಪ್ಪುಗೆಯೇ
ಕನಸೇ ಬಾರದಿರೋ
ಬರಡಾದ ಕಂಗಳಿಗೆ
ಕರೆದೆ ರಂಗಿನ ಅರಮನೆಗೆ
ಎದೆಗಿಳಿದಾ ತಿಳಿ ಹೊಂಬಿಸಿಲೇ
ಬೆಚ್ಚಗಿಡದೇ ಏಕೆ ಸುಡುತಿರುವೆ?
ಭಾವಗಳ ಅರಿವಿರದೆ
ಅತಿಶಯಿಯಾಗಿರುವೆ ಒಳಗೊಳಗೆ
ನಮ್ಮಾ ನಡುವೆ
ನಗುವೇ ಮದುವೆ
ಈ ಸಣ್ಣ ನಾಲ್ಕು ಸಾಲೇ ನಮಗೆ ಶಕ್ತಿಯೂ
ನಮ್ಮ ಪುಟ್ಟ ಗೂಡೇ ಈಗ ಇದಕೇ ಸಾಕ್ಷಿಯೂ
ಬರೆಯೋಣ ಒಂದಿಷ್ಟು ಸಾಲನು
ಹಾಕೋಣ ಒಂದಾಗಿ ಸಹಿಯನು.
