Hoovina Hoovina Hoo Male lyrics, ಹೂವಿನ ಹೂವಿನ ಹೂಮಳೆ the song is sung by Nihal Tauro, Shivani Naveen. from Shrimathi Sindhoora. was composed by Rajesh Ramnath lyrics Kaviraj.
ಹೂವಿನ ಹೂವಿನ ಹೂಮಳೆ Hoovina Hoovina Hoo Male Lyrics in Kannada
ಹೂವಿನ ಹೂವಿನ ಹೂಮಳೆ
ನನ್ನವಳು ತಂದ ಹಾಡು ಮಳೆ
ಕಣ್ಣಿಗೂ ಕಣ್ಣಿಗೂ ಕಾಮನಬಿಲ್ಲು
ನನ್ನವನು ತಂದ ಸಂಭ್ರಮವೆಲ್ಲೊ
ನೀನಿದ್ರೆ ಸಾಕು ನನಗದು ಸಾಕು
ಪ್ರತಿದಿನ ಪ್ರತಿ ಕ್ಷಣ ನೀನೆ ಬೇಕು
ನೀನೆ ನೀನೆ ನನ್ನ ಎಲ್ಲಾ ಸಂತೋಷ
ನೀನೆ ನೀನೆ ಮುಂದೆ ನನ್ನ ಇತಿಹಾಸ
ನಿನ್ನ ಪ್ರೀತಿ ನನ್ನ ಪ್ರಾಣ ಕಾಯೋ ಶ್ವಾಸ
ಎಂದೆಂದೂ ನಾನು ನಿನ್ನ ಮಂದಹಾಸ
ಮೌನವೆ ಮೌನವೆ ಹೋಗು ದೂರ
ಅರಳಲಿ ಮಾತು ಒಲವಿಗೆ ಸೋತು
ಕಣ್ಣಲಿ ಕಣ್ಣಿಡು ನೇರಾನೇರ
ಕಳಿಸುವ ಕುಂತು ಕನಸಿನ ಕಂತು
ಕೊಡುತೀಯ ಇನ್ನು ಕ್ಷಮೆಯನು ನೀನು
ಮುನಿಸನು ಬಿಡು ಬಿಡು ಮೂಢ ನಾನು
ಭೂಮಿ ತಣಿಯೋದಕ್ಕೆ ಬೇಕು ಮುಂಗಾರು
ನಿನ್ನ ಸನಿಹ ನಂಗೆ ಸ್ವರ್ಗ ನೂರಾರು
ಬೇರೆ ಎಲ್ಲೂ ಇಲ್ಲಾ ನಿನ್ನ ಹಾಗೇ ಯಾರು
ಎಲ್ಲಾ ಜನ್ಮಾನು ಹೀಗೆ ನನ್ನ ಸೇರು
ಸಾವಿರ ಸಾವಿರ ಸಾಲು ದೀಪ
ಬೆಳಗುವೆ ನಿನ್ನ ದಾರಿಗೆ ಇನ್ನ
ಆಲಿಸು ಆಲಿಸು ನೀನೆ ಸ್ವಲ್ಪ
ಎದೆಯಲಿ ನಿನ್ನ ನಿಲ್ಲದ ಗಾನ
ಬದುಕೋಕೆ ನಾನು ಕಾರಣ ನೀನು
ಮುಗಿಯದ ಸವಿ ಮುದ ಎಂದು ನೀನು
bharatlyrics.com
ನೀನೆ ನೀನೆ ನನ್ನ ನೀಲಿ ಆಕಾಶ
ನಿನ್ನ ಆಸೆ ಇನ್ನು ನಂಗೆ ಆದೇಶ
ನಿನ್ನ ಕಣ್ಣ ಮುಂದೆ ಎಂದು ನನ್ನ ವಾಸ
ಕಷ್ಟಾನೇ ಇನ್ನು ಜೋಡಿಸೋದು ಪ್ರಾಸ.
