Hombisilu Hombisilu lyrics, ಹೊಂಬಿಸಿಲು ಹೊಂಬಿಸಿಲು the song is sung by Anuradha Bhat. from Shrimathi Sindhoora. was composed by Rajesh Ramnath lyrics written by K. Kalyan.
ಹೊಂಬಿಸಿಲು ಹೊಂಬಿಸಿಲು Hombisilu Hombisilu Lyrics in Kannada
ಹೊಂಬಿಸಿಲು ಹೊಂಬಿಸಿಲು ಕಿರಣಗಳ ಚೆಲ್ಲಿ
ಮೂಡುತಿವೆ ನೋಡಿಲ್ಲಿ ರಂಗಾವಲಿ
ಒಮ್ಮನಸು ಒಮ್ಮನಸು ಕನಸುಗಳ ಚೆಲ್ಲಿ
ಹಾಡುತಿವೆ ನೋಡಿಲ್ಲಿ ಚಿತ್ರಾವಳಿ
ಬಾನಾ ಬಿಲ್ಲು ಬಾಯ್ತುಂಬ ಹಾಡೋ
ಚಿಲಿಪಿಲಿ
ಭೂಮೀ ತುಂಬಾ
ಸಂತೋಷದಾ ಕಚಗುಳಿ
ಸಂಗಮಿಸಿ ಸಂಗಮಿಸಿ
ಒಲವುಳಿಯಲಿ
ಸಂಭ್ರಮಿಸಿ ಸಂಭ್ರಮಿಸಿ
ದಿನ ಕಳೆಯಲಿ
bharatlyrics.com
ಹೊಂಬಿಸಿಲು ಹೊಂಬಿಸಿಲು
ಕಿರಣಗಳ ಚೆಲ್ಲಿ
ಮೂಡುತಿವೆ ನೋಡಿಲ್ಲಿ
ರಂಗಾವಲಿ
ಬಾಂಧವ್ಯವೆಂಬಾ
ತೋರಣವ ಕಟ್ಟಿ
ತುಂಬೋಣ ಎದೆಯಲ್ಲಿ
ಅನುರಾಗ ಬುಟ್ಟಿ
ನಾಳೆಗಳ ಭರವಸೆಯ
ಬಾಗಿಲನು ತಟ್ಟಿ
ಸಮರಸವ ಹಂಚೋಣ
ಸಂಯಮವ ಮೀಟಿ
ಎಲ್ಲಾ ಸುಖಕೂ
ಹೃದಯಾನೆ ಹೊಸಿಲಾಗಲಿ
ಸಂಬಂಧ ಅನುಬಂಧ
ಹೂಗರೆಯಲಿ
ಆಸೆಗಳು ಕಡಲಾಗಿ
ಭೋರ್ಗರೆಯಲಿ
ಹೊಂಬಿಸಿಲು ಹೊಂಬಿಸಿಲು
ಕಿರಣಗಳ ಚೆಲ್ಲಿ
ಮೂಡುತಿವೆ ನೋಡಿಲ್ಲಿ
ರಂಗಾವಲಿ
ಕೈ ತುತ್ತು ಸವಿಯೋಣ
ಒಟ್ಟಾಗಿ ಕುಳಿತು
ನಗು ನಗುತ ಅರಳೋಣ
ನೆನ್ನೆಗಳ ಮರೆತು
ಒತ್ತಾಸೆಯೊಂದೇ
ಉಸಿರೆಂದು ಅರಿತು
ಸಹಬಾಳ್ವೆ ನಡೆಸೋಣ
ಕ್ಷಮೆಯನ್ನು ಕಲಿತು
ಸಹನೆ ಕರುಣೆ
ಮನಸುಗಳ ಕಣ್ಣಾಗಲಿ
ಸಾವಿರದ ಕಾಲಕ್ಕೂ
ಕುಲ ಬೆಳಗಲಿ
ಶ್ರೀಮತಿಯ ಸಿಂಧೂರ
ಸ್ಥಿರವಾಗಲಿ
ಸ್ಥಿರವಾಗಲಿ
