ಜೈ ಆಂಜನೇಯ Jai Anjaneya Lyrics - Kailash Kher

Jai Anjaneya lyrics, ಜೈ ಆಂಜನೇಯ the song is sung by Kailash Kher. from Shrimathi Sindhoora. was composed by A-B-Muralidharan lyrics written by Manjunath Kabse.

ಜೈ ಆಂಜನೇಯ Jai Anjaneya Lyrics in Kannada

ಪಲ್ಲವಿ
ಶಂಕರ ಶ್ರೇಷ್ಠನೆ ತೇಜ ಪ್ರತಾಪನೆ
ಮಾರುತ ಭೀಷ್ಮನೆ ಶಕ್ತಿಸ್ವರೂಪನೆ
ಕೇಸರಿ ನಂದನೆ ರಾಮನಿರಂಜನ
ಸಂಕಟ ಮೋಚನ ಅಂಜನಿ ಪುತ್ರನೆ

ಲಂಕಿಣಿ ಭಂಜನ ದೇವ ವಿರಾಜನೆ
ರಾವಣ ಮರ್ಧನ ವಜ್ರಧನುಷ್ಠನೆ
ವಿಶ್ವವಿರಾಜನ ಜೀವಜನಾರ್ಧನ
ವೀರ ಸುಯೋಧನ ರಾಮ ನಿಯೋಜನ

ರಾಕ್ಷಸ ಸಂತತಿ ಧೀನರ ಕಾಡಿದೇ
ನಂಬಿದ ಪ್ರಾಣಕೆ ಮೋಸವೆ ಆಗಿದೆ
ರಾಮನ ನಾಮವ ಜೀವವು ನಂಬಿದೆ
ನಿನ್ನಯ ರಕ್ಷಣೆ ಬಾಳಿಗೆ ಬೇಕಿದೆ

ಬೀಸುವ ಗಾಳಿಯು ಬೆಂಕಿಯ ಕಾರಿದೆ
ತುಂಬಿದ ಸಾಗರ ರೋಷದಿ ಉಕ್ಕಿದೆ
ಸೂರ್ಯನ ಕೋಪಕೆ ಭೂಮಿಯು ಬಾಡಿದೇ
ಮಾರುತಿ ನಿನ್ನದೆ ಆಸರೆ ಬೇಕಿದೆ

ಅನುಪಲ್ಲವಿ
ರಾಮಾಧೂತನಿಗೇ ನಾನೂ ವಂದಿಸುವೇ
ಸ್ವಾಮಿಯೆ ನಿನ್ನಾ ನಂಬಿದ ನನ್ನಾ ನೀನೆ ಮುನ್ನಡೆಸೂ
ದೇವದೇವನಿಗೇ ನಾನೂ ವಂದಿಸುವೇ

ಕೋಮಲ ಚೇತನ ಕಂಕಣ ಬದ್ದನ
ಜಾನಕಿ ಮಾತೆಯ ಪ್ರೀತಿಯ ಕಂದನ
ಧೀನರ ಪಾಲಿನ ಧೈರ್ಯ ಸಂಜಾತನ
ಸರ್ವ ಸ್ವತಂತ್ರನ ವಿದ್ಯ ವಿಭೀಷಣ
ನಮ್ಮಯ ನಾಳೆಯು ನಿನ್ನದೆ ಯೋಜನೆ
ಸಾಗಲಿ ಹೀಗೆಯೆ ಸತ್ಯದ ಶೋಧನೆ
ಲೋಕದ ಮಾಯೆಯು ನಿನ್ನದೆ ಚಿಂತನೆ

ರಕ್ಷಿಸು ನಮ್ಮನು ನೀನೆಯೆ ದೇವನೆ
ರಮ್ ರಮ್ ರಮ್ ರಾಮರಾಯ
ಲಮ್ ಲಮ್ ಲಮ್ ಲಂಕಲಾಯ
ವಮ್ ವಮ್ ವಮ್ ವಾನಶ್ರೇಯ
ಹಮ್ ಹಮ್ ಹಮ್ ಹಂಸಧೇಯ

ಮಂಗಳ ರೂಪದ ಅಂಜನಿ ರಾಘವ
ರಕ್ಷಣೆ ಮಾಡಿದೆ ಲಕ್ಷ್ಮಣ ಪ್ರಾಣವ
ತಪ್ಪದೆ ಪಾಲಿಸಿ ರಾಮನ ವಾಕ್ಯವ
ಮಾಡಿದೆ ನಿತ್ಯವು ರಾಮನ ಉತ್ಸವ
ತುಂಬಿದ ಸಾಗರ ಹಾರಿದ ಶೂರನೆ
ನಂಬಿದ ವಾನರ ಕಾಯುವ ಧೀರನೆ

ಸೀತೆಯ ಶೋಧನೆ ಮಾಡಿದ ಮಾಯನೆ
ನಿನ್ನಯ ಪಾದಕೆ ವಂದನೆ ವಂದನೆ
ಸೀತೆಯ ಶೋಕವ ನಾಶವ ಮಾಡಿದೆ
ರಾಮನ ಕಾರ್ಯಕೆ ನಿನ್ನನೆ ನೀಡಿದೆ

bharatlyrics.com

ರಾಕ್ಷಸ ಸಂತತಿ ಪ್ರಾಣವ ಹಿಂಡಿದೆ
ರಾಮನ ನಾಮವು ಎಲ್ಲೆಡೆ ತುಂಬಿದೆ
“ಶಂಕರ ಶ್ರೇಷ್ಠನೆ ತೇಜಪ್ರತಾಪನೆ
ಮಾರುತ ಭೀಷ್ಮನೆ ಶಕ್ತಿಸ್ವರೂಪನೆ

ಕೇಸರಿ ನಂದನ ರಾಮನಿರಂಜನ
ಸಂಕಟ ಮೋಚನ ಅಂಜನಿ ಪುತ್ರನೆ
ಜಯ್ ಜಯ್ ಜಯ್ ಹನುಮಾನ್
ಜಯ್ ಜಯ್ ಜಯ್ ಹನುಮಾನ್

ನಿನ್ನೇ ಪೂಜಿಸುವೇ ನಿನ್ನೇ ಪ್ರೀತಿಸುವೇ
ನಿನ್ನಯ ಧ್ಯಾನಾ ಮಾಡುತ ಹೀಗೇ ನಿನ್ನಲೆ ಜೀವಿಸುವೇ
ನೀನೇ ಹೊಂಬೆಳಕೂ ನಿಂದೇ ಈ ಬದುಕೂ

ಜಯ್ ಜಯ್ ಜಯ್ ಜಯ್ ಹನುಮಾನ್
ಜಯ್ ಜಯ್ ಜಯ್ ಜಯ್ ಹನುಮಾನ್
ಜಯ್ ಜಯ್ ಜಯ್ ಜಯ್ ಹನುಮಾನ್
ಜಯ್ ಜಯ್ ಜಯ್ ಜಯ್ ಹನುಮಾನ್
ಜಯ್ ಜಯ್ ಜಯ್ ಜಯ್ ಜಯ್ ಜಯ್
ಜಯ್ ಜಯ್ ಜಯ್ ಜಯ್ ಜಯ್ ಜಯ್ ಹನುಮಾನ್
ರಮ್ ರಮ್ ರಮ್ ರಾಮರಾಯ
ಲಮ್ ಲಮ್ ಲಮ್ ಲಂಕಲಾಯ

ಧೀರನು ಶೂರನು ವಿಜಯೀ ವೀರನೂ
ರಾಮನ ಶ್ಯಾಮನ ಚರಿತಾ ಲೋಲನೂ
ವಿದ್ಯೆಗು ಬುದ್ದಿಗು ಪಂಡಿತ ಈತನೂ
ಭಕ್ತಿಯ ಮಾರ್ಗವ ಸಿದ್ದಿಸಿಕೊಂಡನು
ಅಂಜನಿ ದೇವಿಯ ಅಮೃತ ಪುತ್ರನು
ಕೇಸರಿ ರಾಜನ ಕೀರ್ತಿಯ ಕಂದನು

ಮಾರುತ ವೇಗದ ದೇವರ ದೂತನು
ಅರ್ಜುನ ಕೃಷ್ಣನ ಲಾಂಚನ ಈತನು
ಭಕ್ತರ ಕೂಗಿಗೆ ಓಡಿಯೆ ಬಂದನು
ಸಜ್ಜನರೆಲ್ಲರ ಸಲಹೊ ತೇಜನು

ಹುಣ್ಣಿಯೆ ರಾತ್ರೆಯ ಚೆಂದದ ಚಂದ್ರನು
ಭೂಮಿಯ ಕಾಯುವ ಬೆಳ್ಳಿಯ ಸೂರ್ಯನು
ಮಾರುತಿ ರಾಯನ ಪೂಜೆಯ ವೇಳೆಗೆ
ಆರತಿಯಾಗಲಿ ಪ್ರೇಮದ ದೀವಿಗೆ

ಓಡುವ ಮೋಡದಿ ಹೂಮಳೆ ತುಂಬಿದೆ
ಸಂಭ್ರಮ ಮೂಡಲು ಕೋಗಿಲೆ ಕೂಗಿದೆ
ಜಯ್ ಜಯ್ ಜಯ್ ಜಯ್ ಹನುಮಾನ್
ಜಯ್ ಜಯ್ ಜಯ್ ಜಯ್ ಹನುಮಾನ್

ಸಾಗುವ ದಾರಿಯೆ‌ ಮುಳ್ಳಿನ ಹಾಸಿಗೆ
ನೀನೆಯೆ ನಂಬಿಕೆ ಜೀವನ ಶಾಲೆಗೆ
ಮಾರುತಿ ರಾಯನ ಪೂಜೆಯ ವೇಳೆಗೆ
ಆರತಿಯಾಗಲಿ ಪ್ರೇಮದ ದೀವಿಗೆ
ಲಂಕಿಣಿ ಭಂಜನ ದೇವ ವಿರಾಜನೆ
ರಾವಣ ಮರ್ಧನ ವಜ್ರಧನುಷ್ಠನೆ

ವಿಶ್ವವಿರಾಜನ ಜೀವಜನಾರ್ಧನ
ವೀರ ಸುಯೋಧನ ರಾಮ ನಿಯೋಜನ
ಜಯ್ ಜಯ್ ಜಯ್ ಹನುಮಾನ್
ಜಯ್ ಜಯ್ ಜಯ್ ಹನುಮಾನ್

ಪವನ ತನಯ ಸಂಕಟ ಹರಣ
ಮಂಗಳ ಮೂರತಿ ರೂಪ್
ರಾಮ ಲಖನ ಸೀತಾ ಸಹಿತ
ಹೃದಯ ಬಸಹು ಸುರಭೂಪ್

Jai Anjaneya Lyrics PDF Download
Print Print PDF     Pdf PDF Download

FAQs

The song Jai Anjaneya is from the Shrimathi Sindhoora.

The song Jai Anjaneya was sung by Kailash Kher.

The music for Jai Anjaneya was composed by A B Muralidharan.

The lyrics for Jai Anjaneya were written by Manjunath Kabse.

The music director for Jai Anjaneya is A B Muralidharan.

The song Jai Anjaneya was released under the Anand Audio.

The genre of the song Jai Anjaneya is Devotional.